ರಾಷ್ಟ್ರೀಯ

ಯುವಕನಿಂದ ಜಿಲ್ಲಾಧಿಕಾರಿ ಪತ್ನಿಗೆ ಅಸಭ್ಯ ಸಂದೇಶ: ಅಧಿಕಾರಿಯಿಂದ ಕಚೇರಿಯಲ್ಲೇ ಥಳಿತ!

Pinterest LinkedIn Tumblr


ಕೋಲ್ಕತಾ: ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಂಡತಿಯೊಂದಿಗೆ ಅಸಭ್ಯ ವರ್ತನೆ ತೋರಿದ ಎಂದು ಪಶ್ಚಿಮ ಬಂಗಾಳದ ಡಿಸ್ಟ್ರಿಕ್​ ಮ್ಯಾಜಿಸ್ಟ್ರೆಟರ್​ ಯುವಕನಿಗೆ ಕಚೇರಿಯಲ್ಲಿ ಥಳಿಸಿ, ಕೊಲೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್​ ಆಗಿದೆ. ಐಎಎಸ್​ ಅಧಿಕಾರಿಯ ಈ ಕ್ರಮಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದ್ದರೆ, ಹೆಂಡತಿ ಮಾತ್ರ ಆತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ.

ಪಶ್ಚಿಮ ಬಂಗಾಳದ ಅಲಿಪುರ್ದುರ್​ನ ಡಿಸ್ಟ್ರಿಕ್​ ಮ್ಯಾಜಿಸ್ಟೇಟರ್​ ನಿಖಿಲ್​ ನಿರ್ಮಾಲ್​ ಹೆಂಡತಿಗೆ ಬಿನೊಂದ್​ ಕುಮಾರ್​ ಸರ್ಕಾರ್​ ಎಂಬ ಯುವಕ ಅಸಭ್ಯವಾಗಿ ಸಂದೇಶ ಕಳುಹಿಸಿದ್ದಾನೆ. ಈ ಬಗ್ಗೆ ಹೆಂಡತಿ ಅಧಿಕಾರಿ ಗಮನಕ್ಕೆ ತಂದಿದ್ದಾಳೆ.

ಈ ಸಂಬಂಧ ಯುವಕನನ್ನು ಕಚೇರಿಗೆ ಕರೆತಂದ ಅಧಿಕಾರಿ ಮತ್ತು ಆತನ ಹೆಂಡತಿ ಕಚೇರಿಯಲ್ಲಿ ಆತನಿಗೆ ಹೊಡದು ಥಳಿಸಿದ್ದಾರೆ. ಅಲ್ಲದೇ, ತಮ್ಮ ಜಿಲ್ಲೆಯಲ್ಲಿ ನನ್ನ ವಿರುದ್ಧ ಯಾರು ಮಾತನಾಡಬಾರದು. ನಿನ್ನನ್ನು ನಿನ್ನ ಮನೆಯಲ್ಲಿಯೇ ನಿನ್ನ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಟೀಕೆಗೆ ಗುರಿಯಾಗಿದೆ.

ಯುವಕನ ವಿರುದ್ಧ ಪ್ರಕರಣ ದಾಖಲಿಸದೆ ಅಧಿಕಾರಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ದಂಪತಿ ಯುವಕನನ್ನು ಹಲ್ಲೆ ಮಾಡಿರುವುದು ತಪ್ಪು ಎಂಬ ಟೀಕೆ ಎದುರಿಸಿದ್ದಾರೆ.

ಯಾವಾಗ ಗಂಡನ ಕಾರ್ಯದ ಬಗ್ಗೆ ಕಡು ಟೀಕೆಗಳು ಬರಲು ಶುರುವಾದವೋ ಆಗ ಅಧಿಕಾರಿ ಪರ ನಿಂತ ಹೆಂಡತಿ, ಆತ ಮಾಡಿದ ಕಾರ್ಯದಲ್ಲಿ ತಪ್ಪೇನಿದೆ ಎಂದು ಸುದೀರ್ಘ ಪತ್ರ ಬರೆದು ಫೇಸ್​ಬುಕ್​ನಲ್ಲಿ ಹಾಕಿದ್ದಾಳೆ.

ನಿಖಿಲ್​ ಮದುವೆ ಸಂದರ್ಭದಲ್ಲಿ ನನಗೆ ರಕ್ಷಣೆ ಕೊಡುವುದಾಗಿ ಪ್ರಮಾಣ ನೀಡಿದ್ದರು. ಅದರಂತೆ ಈಗ ನನ್ನ ರಕ್ಷಣೆ ಮಾಡಿದ್ದಾರೆ ಇದರಕ್ಕ್ಇ ತಪ್ಪೇನಿದೆ. ನನ್ನ ಗಂಡನ ಕಾರ್ಯದ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾಳೆ.

Comments are closed.