ರಾಷ್ಟ್ರೀಯ

2019ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ರಾಹುಲ್‌ ಗಾಂಧಿಗೆ ಪತ್ರ ಬರೆದ ಪ್ರಿಯಾ ದತ್ ಪತ್ರ

Pinterest LinkedIn Tumblr

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಂಸದೆ ಪ್ರಿಯಾ ದತ್‌ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಗೆ ಪತ್ರ ಬರೆದಿದ್ದಾರೆ.

ಪಕ್ಷದ ಮುಂಬಯಿ ಘಟಕದೊಳಗೆ ಪರಸ್ಪರ ವಿರೋಧಿ ಬಣಗಳ ನಡುವಿನ ಕಚ್ಚಾಟಕ್ಕೆ ಬೇಸತ್ತು ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ’ ಎಂದು ಪ್ರಿಯಾ ದತ್‌ ಅವರು ರಾಹುಲ್‌ ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದೊಳಗಿನ ಬಣ ಸಂಘರ್ಷವನ್ನು ಪ್ರಶ್ನಿಸಿರುವ ಅವರು, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲನುಭವಿಸಿದ್ದ ಸಂದರ್ಭದಲ್ಲಿ ‘ಪಕ್ಷದ ಸೋಲಿಗೆ ಆಂತರಿಕ ಸಂಘರ್ಷವೇ ಕಾರಣ ಎಂದು ಟೀಕಿಸಿದ್ದರು.

ಕಾಂಗ್ರೆಸ್‌ ಪಕ್ಷದ ನಿರಂತರ ಸೋಲುಗಳಿಗೆ ಅದರ ಅಂತರಿಕ ಕಲಹ ಕಾರಣ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ. ಇಲ್ಲದಿದ್ದರೆ ಈ ರೀತಿಯ ಸೋಲುಗಳು ಹೀಗೆಯೇ ಮುಂದವರಿಯಲಿವೆ’ ಎಂದು ಪ್ರಿಯಾ ದತ್‌ ಟ್ವಿಟರ್‌ನಲ್ಲಿ ಅಂದಿನ ದಿನಗಳಲ್ಲಿ ಬರೆದಿದ್ದರು.

Comments are closed.