ರಾಷ್ಟ್ರೀಯ

ಶಬರಿಮಲೆಗೆ ಭೇಟಿ ನೀಡಿರುವ 10 ಮಹಿಳೆಯರು

Pinterest LinkedIn Tumblr


ತಿರುವನಂತಪುರ: ತಮಿಳುನಾಡು ಮೂಲದ ಮೂವರು ಮಲೇಷ್ಯಾ ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸಿದ್ದಾರೆ ಎಂದು ಕೇರಳ ಪೊಲೀಸ್ ವಿಶೇಷ ಘಟಕ ತಿಳಿಸಿದೆ. ಈ ಮಹಿಳೆಯರು ಪ್ರವೇಶಿಸಿರುವುದು ಪೊಲೀಸ್ ವಿಶೇಷ ಘಟಕ ಚಿತ್ರೀಕರಿಸಿರುವ ವಿಡಿಯೋದಲ್ಲಿ ದಾಖಲಾಗಿದೆ.

ಕನಕದುರ್ಗಾ ಮತ್ತು ಬಿಂದು ಅವರು ದೇಗುಲ ಪ್ರವೇಶಿಸುವುದಕ್ಕೂ ಮೊದಲೇ ಮಲೇಷಿಯಾದ ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಸೆ.28ರಂದು ಮಹಿಳೆಯರ ದೇಗುಲ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಳಿಕ ಕೇರಳದಲ್ಲಿ ಅಯ್ಯಪ್ಪ ಭಕ್ತರ ಆಕ್ರೋಶ ಹೆಚ್ಚಾಗಿದೆ.

ಆಡಳಿತ ಮತ್ತು ವಿಪಕ್ಷಗಳ ನಡುವೆ ಕೋಲಾಹಲವೇ ನಡೆಯುತ್ತಿದೆ. ಹಲವೆಡೆ ಪ್ರತಿಭಟನೆ, ಹಿಂಸಾಚಾರಗಳು ನಡೆದಿವೆ. ಜ.1ರಿಂದ ಶಬರಿಮಲೆಗೆ 50 ಮಹಿಳೆಯರು ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, 10 ಮಹಿಳೆಯರು ಭೇಟಿ ನೀಡಿರುವುದನ್ನು ದೃಢೀಕರಿಸಲು ದಾಖಳೆಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಈ ಎಲ್ಲಾ ಮಹಿಳೆಯರ ವಿವರಗಳನ್ನು ಸಂಗ್ರಹಿಸಿ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಮಲೇಷಿಯಾದ ಮಹಿಳೆಯರ ಭೇಟಿಯನ್ನು ದೃಢೀಕರಿಸಿರುವ ಪೊಲೀಸ್ ಮೂಲಗಳು, ಅಯ್ಯಪ್ಪ ದರ್ಶನ ಪಡೆದಿರುವುದನ್ನು ಬಹಿರಂಗಪಡಿಸಲು ನಿರಾಕರಿಸಿವೆ. ಮಲೇಷಿಯಾದ ತಮಿಳು ಸಮುದಾಯಕ್ಕೆ ಸೇರಿದ 25 ಯಾತ್ರಿಕರ ತಂಡದಲ್ಲಿ ಮೂವರು ಮಹಿಳೆಯರ ಹೆಸರುಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ತಮಿಳುನಾಡು ಮೂಲದ ಮೂವರು ಮಲೇಷಿಯಾದ ಮಹಿಳೆಯರು ಜ.1ರಂದು ಶಬರಿಮಲೆಗೆ ಭೇಟಿ ನೀಡಿದ್ದರು. ಆದರೆ, ದೃಶ್ಯಗಳಲ್ಲಿ ದರ್ಶನದ ಬಳಿಕ ಹಿಂದಿರುಗುತ್ತಿರುವುದು ಇದೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ಮೊಬೈಲ್‌ನಲ್ಲಿ ಚಿತ್ರೀಕರಿಸಿದ 14 ಸೆಕೆಂಡ್‌ಗಳ ವಿಡಿಯೋದಲ್ಲಿ ಮೂವರು ಮಹಿಳೆಯರು ಮುಖವನ್ನು ಶಾಲುಗಳಿಂದ ಮುಚ್ಚಿಕೊಂಡಿರುವ ದೃಶ್ವವಿದೆ ಎಂದು ತಿಳಿದು ಬಂದಿದೆ.

Comments are closed.