ರಾಷ್ಟ್ರೀಯ

ನಿಧನರಾಗಿ ಒಂದು ವರ್ಷಕ್ಕೆ ಖುಲಾಸೆಗೊಂಡ ಅಬ್ದುಲ್ ಕರೀಂ ತೆಲಗಿ

Pinterest LinkedIn Tumblr


ನವದೆಹಲಿ: ನಕಲಿ ಛಾಪಾ ಕಾಗದ ಹಗರಣದಲ್ಲಿ ಅಬ್ದುಲ್ ಕರೀಂ ತೆಲಗಿ ಮತ್ತಿತರರನ್ನು ಕೋರ್ಟ್ ನಿರಪರಾಧಿಗಳೆಂದು ತೀರ್ಪು ಕೊಟ್ಟಿದೆ. ಆದರೆ, ವಿಪರ್ಯಾಸವೆಂದರೆ ಹಗರಣದ ಕಿಂಗ್​ಪಿನ್ ಎನ್ನಲಾದ ಅಬ್ದುಲ್ ತೆಲಗಿ ಅವರು ಸಾವನ್ನಪ್ಪಿ ಒಂದು ವರ್ಷವೇ ಗತಿಸಿದೆ. ತೆಲಗಿ ಮತ್ತಿತರರಿಗೆ ಬೇರೆ ನ್ಯಾಯಾಲಯವು ಶಿಕ್ಷೆ ಸಿಕ್ಕಿತ್ತು. ವಿವಿಧ ಪ್ರಕರಣಗಳಲ್ಲಿ ತೆಲಗಿ ಅವರು 30 ವರ್ಷ ಶಿಕ್ಷೆ ಪಡೆದು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿದ್ದರು. 2001ರಲ್ಲಿ ಬಂಧಿತರಾದ ತೆಲಗಿ ಅವರು ದೀರ್ಘ ಕಾಲದಿಂದ ಸಕ್ಕರೆ ಕಾಯಿಲೆ, ಬಿಪಿ ಇತ್ಯಾದಿಗಳಿಂದು ಬಳಲಿ, ಕಳೆದ ವರ್ಷವಷ್ಟೇ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೀಗ ಮಹಾರಾಷ್ಟ್ರದ ನಾಶಿಕ್ ನಗರದ ನ್ಯಾಯಾಲಯವೊಂದು ಈ ಪ್ರಕರಣದಲ್ಲಿ ತೆಲಗಿ ಮತ್ತಿತರರನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ಟ್ರಾವೆಲ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಕರೀಂ ತೆಲಗಿ 90ರ ದಶಕದಲ್ಲಿ ದೇಶಾದ್ಯಂತ ನಕಲಿ ಛಾಪಾ ಕಾಗದದ ಬೃಹತ್ ದಂಧೆ ನಡೆಸುತ್ತಿದ್ದ. ಸರಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಈ ದಂಧೆಯಲ್ಲಿ ತೆಲಗಿ ಜೊತೆ ಶಾಮೀಲಾಗಿರುವ ಆರೋಪವಿತ್ತು.

Comments are closed.