ರಾಷ್ಟ್ರೀಯ

ಐಸಿಸ್ ಮಾದರಿಯ ಜಿಹಾದಿ ಸಂಘಟನೆಯ ಬಳಿ ಸಿಕ್ಕ ವಸ್ತುಗಳು ಯಾವ್ಯಾವು ಗೊತ್ತಾ?

Pinterest LinkedIn Tumblr


ಹೊಸದಿಲ್ಲಿ: ಐಸಿಸ್‌ ಉಗ್ರಗಾಮಿ ಸಂಘಟನೆ ಪ್ರೇರಿತ ಜಿಹಾದಿ ಘಟಕದಿಂದ ಎನ್‌ಐಎ ಅಧಿಕಾರಿಗಳು ದೇಶೀಯ ರಾಕೆಟ್‌ ಲಾಂಚರ್‌, 12 ಪಿಸ್ತೂಲುಗಳು, 100 ಅಲಾರ್ಮ್‌ ಗಡಿಯಾರಗಳು, 100 ಮೊಬೈಲ್‌ ಫೋನ್‌ಗಳು, 135 ಸಿಮ್‌ ಕಾರ್ಡ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳು ಸೇರಿ ಇತರೆ ವಸ್ತುಗಳನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.

ದಿಲ್ಲಿಯ ಪ್ರಮುಖ ರಾಜಕೀಯ ಹಾಗೂ ಭದ್ರತಾ ಕಚೇರಿಗಳ ಮೇಲೆ ದಾಳಿ ನಡೆಸಲು ಈ ಉಗ್ರ ಸಂಘಟನೆ ಸಂಚು ನಡೆಸಿತ್ತು ಎಂದು ಐಜಿಪಿ ( ಎನ್‌ಐಎ) ಅಲೋಕ್‌ ಮಿತ್ತಲ್ ತಿಳಿಸಿದ್ದಾರೆ. ಇನ್ನು, ಹೆಚ್ಚು ತೀವ್ರವಾದದ ಘಟಕವಾಗಿದ್ದ ಅದು ಸಂಪೂರ್ಣವಾಗಿ ಸಂಘಟನೆಯ ಸದಸ್ಯರ ಹಣದಿಂದಲೇ ನಡೆಸುತ್ತಿತ್ತು. ಅಲ್ಲದ, ಯಾವುದೇ ಸದಸ್ಯರ ವಿರುದ್ಧ ಇದುವರೆಗೆ ಯಾವುದೇ ಕ್ರಿಮಿನಲ್‌ ಕೇಸ್‌ಗಳು ಇಲ್ಲ ಎಂದು ಎನ್‌ಐಎ ತಿಳಿಸಿದೆ.

ಅಲ್ಲದೆ,” ತಮ್ಮ ಮನೆಗಳಿಂದಲೇ ಚಿನ್ನದ ಒಡವೆಗಳನ್ನು ಕದಿಯುತ್ತಿದ್ದ ಸದಸ್ಯರು ಅದನ್ನು ಮಾರಿ, ತಮ್ಮ ಉಗ್ರ ಸಂಘಟನೆಯ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದರು. ಇನ್ನು, ರಿಮೋಟ್‌ ಕಂಟ್ರೋಲ್‌ ಬಾಂಬ್‌ ಸ್ಫೋಟಿಸಲು ಅಥವಾ ಫಿದಾಯೀನ್‌ ಮಾದರಿಯಲ್ಲಿ ದಾಳಿ ನಡೆಸಲು ಹರ್ಕತ್‌ ಉಲ್‌ ಹರ್ಬ್‌ ಇ ಇಸ್ಲಾಂ ಸದಸ್ಯರು ಪ್ಲಾನ್‌ ಮಾಡುತ್ತಿದ್ದರು” ಎಂದು ಮಿತ್ತಲ್ ಹೇಳಿದ್ದಾರೆ.

ಇನ್ನು, ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ ಬಳಿಕ ಉಗ್ರ ಘಟಕದ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಲಿದ್ದು, ಅವರ ಯೋಜನೆಗಳು ಹಾಗೂ ಸಂಘಟನೆಯ ನಿರ್ವಾಹಕನ ಬಗ್ಗೆಯೂ ಮಾಹಿತಿ ಸಿಗಲಿದೆ. ಅಮ್ರೋಹಾದಲ್ಲಿ ಬುಲೆಟ್‌ ಪ್ರೂಫ್‌ ಫಿದಾಯೀನ್ ಕವಚವನ್ನು ಮಾಡಲು ಯತ್ನಿಸುತ್ತಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿತ್ತಲ್ ತಿಳಿಸಿದ್ದಾರೆ.

ಇನ್ನು, 29 ವರ್ಷದ ಬಂಧಿತ ಮೊಹಮ್ಮದ್ ಸೋಹೇಲ್‌ ಮಾಸ್ಟರ್‌ಮೈಂಡ್‌ ಎನ್ನಲಾಗಿದ್ದು, ಅವರು ಬಾಂಬ್‌ ಸರ್ಕ್ಯೂಟ್‌ ಬಗ್ಗೆ ಇತರರಿಗೆ ಹೇಳಿಕೊಡುತ್ತಿದ್ದ ಬಗ್ಗೆ ವೀಡಿಯೋವೊಂದು ಎನ್‌ಐಎಗೆ ದೊರೆತಿದೆ. ದಾಳಿ ವೇಳೆ 7.5 ಲಕ್ಷ ರೂ. ನಗದು, 25 ಕೆಜಿಯಷ್ಟು ಬಾಂಬ್ ತಯಾರು ಮಾಡುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ಪ್ರಮುಖ ಸರಕಾರಿ ಕಟ್ಟಡಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ರಾಜಕೀಯ ವ್ಯಕ್ತಿಗಳ ಹಾಗೂ ಇತರೆ ವಿಐಪಿಗಳನ್ನು ಟಾರ್ಗೆಟ್ ಮಾಡಲು ಪ್ಲಾನ್ ಮಾಡುತ್ತಿದ್ದರು. ಸದ್ಯದದಲ್ಲಿಯೇ ದಾಳಿ ನಡೆಸಲು ಸ್ಕೆಚ್ ಹಾಕಿದ್ದರು ಎಂಬ ಬಗ್ಗೆ ತಿಳಿದುಬರುತ್ತದೆ” ಎಂದೂ ಮಿತ್ತಲ್ ತಿಳಿಸಿದ್ದಾರೆ.

Comments are closed.