ರಾಷ್ಟ್ರೀಯ

ರಾಜಕಾರಣಿಗಳಿಂದ ಹನುಮಂತನ ಜಾತಿ, ಧರ್ಮದ ವಿಚಾರವಾಗಿ ಹೇಳಿಕೆಗೆ ಹಿಂದೂ ಸನ್ಯಾಸಿಗಳ ಧಾರ್ಮಿಕ ಪರಿಷತ್ – ಅಖಾಡ ಪರಿಷದ್ ಆಕ್ರೋಶ

Pinterest LinkedIn Tumblr

ಹನುಮಂತನ ಜಾತಿ, ಧರ್ಮದ ವಿಚಾರವಾಗಿ ರಾಜಕಾರಣಿಗಳು ಹೇಳಿಕೆ ನೀಡುತ್ತಿದ್ದಾರೆ, ಇವರು ತಮ್ಮ “ಮಾನಸಿಕ ಸ್ಥಿಮಿತ” ಕಳೆದುಕೊಂಡಿದ್ದಾರೆ ಎಂದು ಹಿಂದೂ ಸನ್ಯಾಸಿಗಳ ಧಾರ್ಮಿಕ ಪರಿಷತ್ – ಅಖಾಡ ಪರಿಷದ್ ಟೀಕಿಸಿದೆ.

ಹಿಂದೂ ದೇವರಾದ ಹನುಮಂತನ ಕುರಿತಂತೆ ರಾಜಕಾರಣಿಗಳು ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಅಖಾಡ ಪರಿಷದ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಹೇಳಿದರು.

“ಹನುಮಂತನ ಜಾತಿ, ಧರ್ಮದ ಕುರಿತಂತೆ ಅನಗತ್ಯವಾದ ಹೇಳಿಕೆಗಳನ್ನು ನೀಡುತ್ತಿರುವ ರಾಜಕಾರಣಿಗಳು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ, ಅವರು ತಮ್ಮ ಮಿದುಳನ್ನು ಪರೀಕ್ಷಿಸಿಕೊಳ್ಳಬೇಕಿದೆ”ನರೇಂದ್ರ ಗಿರಿ ಪಿಟಿಐಗೆ ಹೇಳಿದ್ದಾರೆ.

ದೇವರನ್ನು ಜಾತಿಗಳಾಗಿ ವಿಂಗಡಿಸಬಾರದು ಎಂದು ಹೇಳಿದರು “ಹನುಮಂತನು ಶಿವನ ಅಂಶ, ಅವನು ರುದ್ರದೇವರ ಅವತಾರ. ರಾಜಕಾರಣಿಗಳು ಈ ಕೂಡಲೇ ದೇವರ ಕುರಿತಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಲಿ” ಅವರು ಹೇಳಿದರು.

ಅಖಾಡದ ಇನ್ನೋರ್ವ ಮುಖ್ಯಸ್ಥರಾದ ಲಕ್ಷ್ಮಿನಾರಾಯಣ ತ್ರಿಪಾಠಿ ಸಹ ದೇವರ ಜಾತಿ ಮತ್ತು ಧರ್ಮದ ಬಗ್ಗೆ ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ ಎಂದರು.”ರಾಜಕಾರಣಿಗಳು ನಿರಂತರವಾಗಿ ತಮ್ಮ ಹಿತಾಸಕ್ತಿಗಳಿಗಾಗಿ ಹನುಮಂತನ ಕುರಿತು ಹೇಳಿಕೆ ನೀಡುತ್ತಿದ್ದಾರೆ.ಇದು ಅಪಮಾನಕರ, ದೇವತೆಗಳು, ದೇವರನ್ನು ಎಂದಿಗೂ ರಾಜಕೀಯದಿಂದ ದೂರವಿಡಬೇಕು. ಏಕೆಂದರೆ ದೇವರ ಅವತಾರಗಳಲ್ಲಿ ಯಾವುದೇ ಜಾತಿ ಇಲ್ಲ”,

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮಾಯಣದ ಮಹಾ ಪಾತ್ರಗಳಲ್ಲಿ ಒಬ್ಬರಾದ ಹನುಮಂತನು ದಲಿತನಾಗಿದ್ದಾನೆಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು.

ಕಳೆದ ವಾರ, ಉತ್ತರ ಪ್ರದೇಶದ ಬಿಜೆಪಿ ಎಂಎಲ್ಸಿ ಬುಕ್ಕಲ್ ನವಾಬ್ ಹನುಮಂತಮುಸ್ಲಿಂ ಎಂದು ಆರೋಪಿಸಿದ್ದರೆ , ಯುಪಿ ಧಾರ್ಮಿಕ ವ್ಯವಹಾರಗಳ ಸಚಿವ ಲಕ್ಷ್ಮಿ ನಾರಾಯಣ್ ಚೌಧರಿ ವಾನರನಾದ ಹನುಮಂತನು ಜಾಟ್ ಸಮುದಾಯಕ್ಕೆ ಸೇರಿದ್ದನೆಂದು ಹೇಳಿದ್ದರು.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಂಸದ ರಾಮ ಶಂಕರ್ ವಿದ್ಯಾರ್ಥಿ ಹನುಮಂತ ಬುಡಕಟ್ಟಿನ ‘ಗೊಂಡ್’ ಸಮುದಾಯಕ್ಕೆ ಸೇರಿದವರಾಗಿದ್ದನೆಂದು ವಾದಿಸಿದ್ದರು.

Comments are closed.