ರಾಷ್ಟ್ರೀಯ

ಗುಜರಾತ್: ಜಸ್‌ಧನ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು

Pinterest LinkedIn Tumblr


ಅಹಮದಾಬಾದ್: ಗುಜರಾತ್‌ ರಾಜ್ಯದ ಜಸ್‌ಧನ್ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಕುನ್ವರಾಜೀ ಬಾವಾಲಿಯಾ 19,985 ಮತಗಳಿಂದ ಜಯಗಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಗೂ ಮೊದಲೇ ನಡೆಯುತ್ತಿರುವ ಈ ಉಪಚುನಾವಣೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯ ಚುನಾವಣೆ ಎಂದೇ ಪರಿಗನಿಸಿದ್ದವು. ಈ ಕ್ಷೇತ್ರದ ಉಪಚುನಾವಣೆ ಡಿಸೆಂಬರ್ 20ರಂದು ನಡೆದಿತ್ತು.

ಈ ಉಪಚುನಾವಣೆಯಲ್ಲಿ ಬಿಜೆಪಿ ಕೋಲಿ ಸಮುದಾಯದ ಪ್ರಭಾವಿ ನಾಯಕ ಮತ್ತು ರಾಜ್ಯ ಸಚಿವ ಸಂಪುಟ ಸಚಿವರಾಗಿದ್ದ ಕುನ್ವರಾಜೀ ಬಾವಾಲಿಯಾ ಅವರಿಗೆ ಟಿಕೆಟ್ ನೀಡಿತ್ತು.

ಕುನ್ವರಾಜೀ ಬಾವಾಲಿಯಾ ಜಸ್‌ಧನ್ ಕ್ಷೇತ್ರದಲ್ಲಿ ನಾಲ್ಕು ಬಾರಿ 1995, 1998, 2002, 2017ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಜಯಗಳಿಸಿದ್ದಾರೆ.

Comments are closed.