ರಾಷ್ಟ್ರೀಯ

ದರ ಇಳಿಕೆ ಕಾಣುತ್ತಿರುವ ಪೆಟ್ರೋಲ್‌

Pinterest LinkedIn Tumblr


ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದ್ದು, ಸತತ ಎರಡು ದಿನಗಳ ಏರಿಕೆ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ 20 ಪೈಸೆಗಳವರೆಗೆ ದರ ಇಳಿಕೆಯಾಗಿದೆ.

ಬೆಂಗಳೂರಿನಲ್ಲೂ ಬೆಲೆ ಇಳಿಕೆ ಕಂಡಿದ್ದ ಇಂಧನ ಬೆಲೆಯು ಎರಡು ದಿನಗಳಲ್ಲಿ ಏರಿಕೆ ಕಂಡಿತ್ತು. ಶುಕ್ರವಾರ ಮತ್ತೆ ಬೆಲೆ ಇಳಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 17 ಪೈಸೆ ಇಳಿಕೆಯಾಗುವ ಮೂಲಕ 71.03 ರು.ಗಳಷ್ಟಿದೆ. ಇನ್ನು ಡೀಸೆಲ್ ಬೆಲೆಯಲ್ಲೂ 16 ಪೈಸೆ ಇಳಿಕೆಯಾಗಿ 64.74 ರು.ಗೆ ಮಾರಾಟವಾಗುತ್ತಿದೆ.

ಇನ್ನೂ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 17 ಪೈಸೆ ಕಡಿಮೆಯಾಗುವ ಮೂಲಕ 64.39 ರು.ಗಳಷ್ಟಿದ್ದರೆ, ಡೀಸೆಲ್‌ಗೆ 15 ಪೈಸೆ ಇಳಿಕೆಯಾಗುವ ಮೂಲಕ 64.39ರು.ಗಳಿಗೆ ಮಾರಾಟವಾಗುತ್ತಿದರೆ. ಮುಂಬೈನಲ್ಲಿ ಪೆಟ್ರೋಲ್ 76.08 ರು.ಗೆ ಮಾರಾಟವಾಗುತ್ತಿದ್ದು, 17 ಪೈಸೆ ಕಡಿಮೆಯಾಗಿದೆ. ಇನ್ನು ಡೀಸೆಲ್ ಲೀಟರ್ ಗೆ .16 ಪೈಸೆ ಕಡಿಮೆಯಾಗಿ 67.39 ರು.ಗಳಷ್ಟಿದರೆ. ಚೆನ್ನೈನಲ್ಲಿ ಪೆಟ್ರೋಲ್ ಲೀ.ಗೆ 18 ಪೈಸೆ ಕಡಿಮೆಯಾಗಿ 73.11 ರು.ಗಳಿದ್ದರೆ, ಲೀಟರ್ ಡೀಸೆಲ್ 67.98 ರು.ಗಳಿಗೆ ಮಾರಾಟವಾಗುತ್ತದೆ.

ಅದೇರೀತಿ ಕೋಲ್ಕತಾದಲ್ಲಿಯೂ 72.55 ರೂ.ಗೆ ಪೆಟ್ರೋಲ್ ಮಾರಾಟವಾಗುತ್ತಿದ್ದು, ಡೀಸೆಲ್ 66.15 ರು.ಗಳಷ್ಟಿದೆ. ಎರಡು ತಿಂಗಳಿನಿಂದಲೂ ಇಳಿಕೆ ಕಾಣುತ್ತಲೇ ಸಾಗಿದ್ದ ಇಂಧನ ಬೆಲೆಯು ಕಳೆದ ಎರಡು ದಿನಗಳಲ್ಲಿ ಕೊಂಚ ಏರಿಕೆ ಕಂಡಿತ್ತು.

Comments are closed.