ರಾಷ್ಟ್ರೀಯ

ನೋಟು ರದ್ದತಿಯಿಂದ ಅಸುನೀಗಿದ್ದವರ ಕುರಿತು ಮೊದಲ ಬಾರಿ ಮಾತನಾಡಿದ ಕೇಂದ್ರ!

Pinterest LinkedIn Tumblr


ನವದೆಹಲಿ: ನೋಟು ಅಮಾನ್ಯೀಕರಣದ ತಪ್ಪು ನಿರ್ಧಾರದಿಂದ ಹಲವು ಅಮಾಯಕ ಜನರು ಪ್ರಾಣ ಕಳೆದುಕೊಳ್ಳುವಂತೆ ಆಯಿತು ಎಂದು ಕಾಂಗ್ರೆಸ್​ ಹಾಗೂ ಜನ ಸಮಾನ್ಯರು ಟೀಕೆ ವ್ಯಕ್ತಪಡಿಸಿದ್ದರೂ ಈ ಬಗ್ಗೆ ಮೋದಿ ಸರ್ಕಾರ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ನೋಟು ಅಮಾನ್ಯೀಕರಣಗೊಂಡು ಎರಡು ವರ್ಷದ ಬಳಿಕ ಕೇಂದ್ರ ಸರ್ಕಾರ ಈ ಕುರಿತು ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದೆ.

ಎನ್​ಡಿಎ ಸರ್ಕಾರದ ಕೊನೆ ಚಳಿಗಾಲ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ,ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ, 2016ರಲ್ಲಿ ಏಕಾಏಕಿ ಹೆಚ್ಚು ಮುಖಬೆಲೆಯ ನೋಟು ಆಮಾನ್ಯೀಕರಣದಿಂದಾಗಿ ಅನೇಕರು ಜೀವವನ್ನು ಕಳೆದುಕೊಂಡರು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.

ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಉಂಟಾದ ಪರಿಸ್ಥಿತಿಯಿಂದ ವೇಳೆ ಎಸ್​ಬಿಐ ಬ್ಯಾಂಕ್​ನ ಮೂವರು ಸಿಬ್ಬಂದಿ ಹಾಗೂ ಒಬ್ಬರು ಗ್ರಾಹಕರು ಪ್ರಾಣ ಕಳೆದುಕೊಂಡಿದ್ದಾರೆ. ಇವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದರು.

ನೋಟು ಅಮಾನ್ಯೀಕರಣದಲ್ಲಿ ಈ ನಾಲ್ಕು ಸಾವು ಸಂಭವಿಸಿದರ ಕುರಿತು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಕೇಂದ್ರಕ್ಕೆ ವರದಿನೀಡಿತು. ಇದರ ಹೊರತಾಗಿ ಇತರೆ ಖಾಸಗಿ ಬ್ಯಾಂಕ್​ಗಳು ಯಾವುದು ಕೂಡ ಸಾವು ನೋವು ಸಂಭವಿಸಿದ ಕುರಿತು ವರದಿ ಮಾಡಿಲ್ಲ ಎಂದರು.

ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಹಣ ಬದಲಾವಣೆಗೆ ಸಾಲು ನಿಂತ ಜನರು ಸಾವನ್ನಪ್ಪಿದ ಕುರಿತು,ಈ ನಿರ್ಧಾರಿದಂದ ಆಘಾತಗೊಂಡು ಹಾಗೂ ಕೆಲಸದ ಒತ್ತಡದಿಂದ ಪ್ರಾಣ ಕಳೆದುಕೊಂಡ ಕುರಿತು ಸಿಪಿಐ (ಎಂ) ಸಂಸದರ ಎಲಂರಾಮ್​ ಕರೀಂ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದರು.

ಈ ಕುರಿತು ಉತ್ತರಿಸಿದ ಹಣಕಾಸು ಸಚಿವರು, ಗ್ರಾಹಕರಿಗೆ 3 ಲಕ್ಷ ಸೇರಿದಂತೆ ಒಟ್ಟು 44 ಲಕ್ಷ ಪರಿಹಾರವನ್ನು ಸಂತ್ರಸ್ಥ ಕುಟುಂಬಗಳಿಗೆ ನೀಡಲಾಗಿದೆ. ನೋಟು ಅಮಾನ್ಯೀಕರಣದಿಂದ ದೇಶದ ಉದ್ಯಮ ಹಾಗೂ ಉದ್ಯೋಗಿಗಳ ಮೇಲೆ ಉಂಟಾದ ಪರಿಸ್ಥಿತಿಯ ಈ ಕುರಿತು ಯಾವುದೇ ನಿರ್ದಿಷ್ಟ ಅಧ್ಯಯನವನ್ನು ಕೈಗೊಳ್ಳಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

2015-16ರಲ್ಲಿ ನೋಟುನ್ನು ಮುದ್ರಿಸಲು 3,421 ಕೋಟಿ ರೂ ವ್ಯಯಮಾಡಲಾಗಿದೆ, ಇದಕ್ಕೂ ಮುನ್ನ ನೋಟು ಅಮಾನ್ಯೀಕರಣಕ್ಕೆ ಮುಂಚೆಯೇ 2016-17 ಹಾಗೂ 2017-18ಸಾಲಿನ ನೋಟುಗಳ ಮುದ್ರಣಕ್ಕೆ ಕ್ರಮವಾಗಿ 7,965 ಹಾಗೂ 4,912 ಕೋಟಿ ಖರ್ಚು ಮಾಡಲಾಗಿದೆ,

1.09 ಬಿಲಿಯನ್​, 1.47 ಬಿಲಿಯನ್​ ಹಾಗೂ 1.15 ಬಿಲಿಯನ್​ ಹಣವನ್ನು ಕ್ರಮವಾಗಿ 2015-16, 2016-17 ಹಾಗೂ 2017-18ರಲ್ಲಿ ಕರೆನ್ಸಿ ಹಿಂಪಡೆಯಲು ಖರ್ಚುಮಾಡಲಾಗಿದೆ ಎಂದು ವಿವರಿಸಿದರು.

ಕಪ್ಪು ಹಣ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 2016 ನ.8ರಂದು ಏಕಾಏಕಿ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಹೆಚ್ಚು ಮುಖಬೆಲೆ ನೋಟುಗಳಾದ 500 ಹಾಗೂ 1000 ರೂ ಹಣವನ್ನು ಅಮಾನ್ಯೀಕರಣ ಮಾಡಿತು. ಜನರು ತಮ್ಮಲ್ಲಿದ್ದ ನೋಟುಗಳು ಚಲಾವಣೆಯಾಗುವುದಿಲ್ಲ ಎಂದು ತಿಳಿಯುತ್ತಿದ್ದಂತೆ ಅವುಗಳನ್ನು ಬದಲಾವಣೆ ಮಾಡಿಕೊಳ್ಳಲು ಬ್ಯಾಂಕ್​ಗಳ ಮುಂದೆ ಸಾಲುಗಟ್ಟಿ ತಿಂಗಳಾನು ಗಟ್ಟಲೆ ಬೆಳಗ್ಗೆಯಿಂದ ಸಂಜೆವರೆಗೆ ಸಾಲು ನಿಂತರು. ಈ ವೇಳೆ ಇದರಿಂದ ಅನೇಕ ವೃದ್ಧರು, ಮಹಿಳೆಯರು, ಸಾವನ್ನಪ್ಪಿದರು.

ಅನೇಕರ ಅಮಾಯಕರ ಸಾವಿಗೆ ಕಾರಣವಾದ ಈ ನೋಟು ಅಮಾನ್ಯೀಕರಣ ತೀರ್ಮಾನ ತಪ್ಪು ಎಂದು ಎನ್​ಡಿಎ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಯಾದವು.

Comments are closed.