ರಾಷ್ಟ್ರೀಯ

ಪಂಚರಾಜ್ಯ ಚುನಾವಣೆ ಫ‌ಲಿತಾಂಶ, ಜನ ಏನಾಂತಾರೆ?

Pinterest LinkedIn Tumblr


ಪ್ರತ್ಯೂಶ್‌ ದೇವ್ಲಿಕರ್‌
ಪಂಚರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಮಾತಿನಲ್ಲಿ ಸತ್ಯವಿಲ್ಲ. ಅದರಲ್ಲೂ ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನಗಳಲ್ಲಿ 2019ರ ಚುನಾವಣೆ ಬಿಜೆಪಿಗೆ ಭಾರೀ ಸವಾಲು ಒಡ್ಡಲಿದೆ.

ಮೃಣಾಲ್‌ ವಾಲಿಯಾ
ಮಣಿಪುರದಲ್ಲಿ ಸೋಲನುಭವಿಸುವ ಮೂಲಕ ಇಡೀ ಈಶಾನ್ಯದಿಂದ ಮುಕ್ತವಾಗಿದೆ ಕಾಂಗ್ರೆಸ್‌. ಲೋಕಸಭಾ ಚುನಾವಣೆಗಳಲ್ಲಿ ಈ 8 ರಾಜ್ಯಗಳು ಬಿಜೆಪಿಯತ್ತ ವಾಲಲಿವೆ.

ರಮಣಜಿತ್‌ ಇ
ರಾಹುಲ್‌ ಗಾಂಧಿಯವರು ತಮ್ಮ ಪಕ್ಷ ಮೂರು ರಾಜ್ಯಗಳಲ್ಲಿ ಗೆದ್ದ ನಂತರ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರಕ್ಕೆ ಬುದ್ಧಿಮಾತು ಹೇಳಿದರು. ಒಂದು ವೇಳೆ ಕಾಂಗ್ರೆಸ್‌ ಸೋತಿತ್ತೆಂದರೆ ರಾಹುಲ್‌ ಇಷ್ಟೊತ್ತಿಗಾಗಲೇ ವಿದೇಶದಲ್ಲಿ ಇರುತ್ತಿದ್ದರು.

ಮುರಳೀಧರ್‌ ಕಣ್ಣರ್ತಿಯನ್‌
ರೈತರ ಪ್ರತಿಭಟನೆಗಳನ್ನು “ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಪಿತೂರಿ’ ಎಂದು ಅವಮಾನಿಸಿತು ಬಿಜೆಪಿ. ಈ ಕಾರಣಕ್ಕಾಗಿಯೇ ಅನ್ನದಾತರು ಆ ಪಕ್ಷದ ಮೇಲೆ ಮುನಿಸಿಕೊಂಡದ್ದು.

ಟ್ರಾಲ್‌ಟೇಲ್ಸ್‌
ನೋಡುತ್ತಿರಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಚುನಾವಣಾ ಘೋಷಣೆಯಲ್ಲಿ “ಸಾಲಮನ್ನಾ’ ಪ್ರಮುಖ ಜಾಗ ಪಡೆಯಲಿದೆ. ಜನಪ್ರಿಯ ಕಾರ್ಯಕ್ರಮಗಳೇ ಚುನಾವಣಾ ಫ‌ಲಿತಾಂಶವನ್ನು ತೀರ್ಮಾನಿಸುವಂತಾಗುವುದು ಭಾರತದ ದುರಂತ.

ಕಾಂಚನ್‌ ಬೂಂಬಕ್‌
ಕೇಂದ್ರ ಸರ್ಕಾರ ಸೋಲಿನ ಜವಾಬ್ದಾರಿಯನ್ನೆಲ್ಲ ರಾಜ್ಯ ನಾಯಕರ ಮೇಲೆ ಹೊರಿಸುವುದು ಬಹುದೊಡ್ಡ ತಪ್ಪು. ಬಿಜೆಪಿ ಗೆದ್ದಿದ್ದರೆ ಅದನ್ನು ಮೋದಿ ಮ್ಯಾಜಿಕ್‌ ಎಂದು ಬಿಂಬಿಸುತ್ತಿರಲಿಲ್ಲವೇ?

ಭಾವನಾ ವಿಶಾಲ್‌
ಭಾರತದಲ್ಲಿ ರಾಜಕೀಯ ಪಕ್ಷಗಳು ಮತ್ತದರ ನಾಯಕರು ಆಡಳಿತ, ಜನಸೇವೆಗಿಂತ ಚುನಾವಣಾ ಪ್ರಚಾರ, ರ್ಯಾಲಿಗಳಲ್ಲೇ ಅಧಿಕ ಸಮಯ ಕಳೆದುಬಿಡುತ್ತಾರೆ. ಚುನಾವಣಾ ಆಯೋಗ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಮುಕುಂದ್‌ ಶೇಖರನ್‌
ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲಾ ಪಕ್ಷಗಳಿಗೂ ಮಹತ್ವವಿರುತ್ತದೆ. ಭಾರತದಂಥ ವೈವಿಧ್ಯಮಯ ದೇಶದಲ್ಲಿ ಒಂದೊಂದು ಪಕ್ಷ ಒಂದೊಂದು ರಾಜ್ಯದಲ್ಲಿ ಮುಖ್ಯವಾಗುತ್ತದೆ. ಒಂದು ಪಕ್ಷವನ್ನು ಆ ದೇಶದಿಂದ ಮುಕ್ತಮಾಡಿಸುವುದು ಯಾವುದೇ ನಾಯಕನಿಗಾಗಲಿ, ಪಕ್ಷಕ್ಕಾಗಲಿ ಸಾಧ್ಯವಿಲ್ಲ.

ರಾಗೇಶ್‌ ಬಯಕ್ಕೊಡನ್‌
ಬಿಜೆಪಿ ಅಭಿವೃದ್ಧಿಯ ಮಾತನ್ನು ಬಿಟ್ಟು ಕೇವಲ ಧರ್ಮದ ಆಧಾರದಲ್ಲಿ ಜನರ ಮತಗಳನ್ನು ಸೆಳೆಯುವುದನ್ನು ಬಿಡಬೇಕು. ಅನ್ಯ ಪಕ್ಷಗಳಂತೆ ಅದೂ ಓಟ್‌ ಬ್ಯಾಂಕ್‌ ರಾಜಕೀಯಕ್ಕೆ ನಿಂತುಬಿಟ್ಟರೆ, ಅಭಿವೃದ್ಧಿ ಮಾಡುವವರು ಯಾರು?

ತೂಜಾನೇನಾ
ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲಿಗರ ವರ್ತನೆ ಒಂದೇ ರೀತಿಯಲ್ಲಿಯೇ ಇರುತ್ತದೆ. ಗೆದ್ದವರು ಬಿದ್ದವರನ್ನು ಹಂಗಿಸಿ ಕುಣಿದಾಡುವುದು, ಸೋತವರು ಸಂತ್ರಸ್ತರ ಪಾತ್ರ ವಹಿಸುವುದು!

ನಾಟ್‌ಸೋಫ‌ನ್ನಿ
ಪಂಚರಾಜ್ಯ ಚುನಾವಣೆಗಳಲ್ಲೇ ಭಾರತೀಯ ಮಾಧ್ಯಮಗಳು ಈ ಪರಿ ಗದ್ದಲ ಮಾಡಿದವು. ಪ್ರಳಯವೇ ಆಗಿಹೋಗುತ್ತಿದೇನೋ ಎನ್ನುವಂತೆ ವರ್ತಿಸಿದವು. ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಟಿ.ವಿ. ಆಫ್ ಮಾಡಿದರೆ ಬದುಕುಳಿಯುತ್ತೀರಿ!

ವಿಘ್ನೇಶ್‌ ಪ್ರೀತಮ್‌
ಪಂಚರಾಜ್ಯ ಫ‌ಲಿತಾಂಶವನ್ನು ಟೆಲಿವಿಷನ್‌ ಮಾಧ್ಯಮಗಳು ವಿಶ್ಲೇಷಿಸುವ ಪರಿ ನೋಡಿ ಹೇವರಿಕೆಯಾಗುತ್ತದೆ. ಪ್ರತಿಯೊಂದು ಸುದ್ದಿವಾಹಿನಿಯೂ ಒಂದೊಂದು ಪಕ್ಷದ ರಾಜಕೀಯ ಅಂಗವಾಗಿಬಿಟ್ಟಿದೆ ಎನ್ನುವುದು ನಿರ್ವಿವಾದ. ಇವಕ್ಕೆ ಹೋಲಿಸಿದರೆ ದೂರದರ್ಶನವೇ ಎಷ್ಟೋ ಉತ್ತಮ.

Comments are closed.