ರಾಷ್ಟ್ರೀಯ

ಕಾಶ್ಮೀರ; ಉಗ್ರರ ಗುಂಡೇಟಿಗೆ ಮೂವರು ಪೊಲೀಸರು ಬಲಿ

Pinterest LinkedIn Tumblr


ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಅವರ ದಾಳಿಗೆ ಮೂವರು ಪೊಲೀಸರು ಬಲಿಯಾಗಿದ್ದಾರೆ.

ಪೊಲೀಸರು ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಗಾಗಿ ಕಾವಲಿದ್ದರು. ಜೈನ್​ಪೊರಾ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ಇದ್ದ ಕೊಠಡಿಗೆ ನುಗ್ಗಿದ ಭಯೋತ್ಪಾದಕರು ನಾಲ್ವರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಬ್ದುಲ್​ ಮಜೀದ್​, ಮನ್ಜೂರ್​ ಅಹಮದ್​ ಮತ್ತು ಮೊಹಮ್ಮದ್​ ಅಮಿನ್​ ಸಾವಿಗೀಡಾದ ಪೊಲೀಸ್​ ಸಿಬ್ಬಂದಿ. ಮತ್ತೊಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಪಕ್ಕದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರರು ಪೊಲೀಸರ ಶಸ್ತ್ರಾಸ್ತ್ರಗಳ ಜೊತೆಗೆ ಪಲಾಯನ ಮಾಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಜನರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.