ರಾಷ್ಟ್ರೀಯ

ಶೀಘ್ರವೇ 4 ಗಂಟೆಗಳಲ್ಲಿ ಸಿಗಲಿದೆ ಪ್ಯಾನ್ ಕಾರ್ಡ್!

Pinterest LinkedIn Tumblr


ನವದೆಹಲಿ: ಇನ್ನು ಮುಂದೆ ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೆ ಹೆಚ್ಚು ಕಾಯಬೇಕಾದ ಅಗತ್ಯವಿಲ್ಲ. ತೆರಿಗೆ ಇಲಾಖೆ ಕೇವಲ 4 ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ನ್ನು ನೀಡುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರವೇ ನಾಲ್ಕು ಗಂಟೆಗಳಲ್ಲೇ ಗ್ರಾಹಕರಿಗೆ ಪ್ಯಾನ್ ಕಾರ್ಡ್ ಸಿಗಲಿದೆ.

ಹೌದು, ತೆರಿಗೆ ಇಲಾಖೆ ಕ್ರಾಂತಿಕಾರಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದು ಅರ್ಜಿ ಸಲ್ಲಿಸಿ ಕೇವಲ ನಾಲ್ಕು ಗಂಟೆಗಳಲ್ಲಿ ಪ್ಯಾನ್‌ಕಾರ್ಡ್ ವಿತರಿಸುವುದೂ ಅವುಗಳಲ್ಲೊಂದಾಗಿದೆ.

ಇಂಡಸ್ಟ್ರಿ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಅಧ್ಯಕ್ಷ ಸುಶೀಲ್‌ ಚಂದ್ರ, “ತೆರಿಗೆ ಇಲಾಖೆ ತಂತ್ರಜ್ಞಾನ ಬಳಸಿಕೊಂಡು ಹಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನೂ ಜಾರಿಗೆ ತರಲು ನಿರ್ಧರಿಸಿದೆ. ಇದಲ್ಲದೆ ತೆರಿಗೆಗಳ ಪೂರ್ವಪಾವತಿ, ರಿಟರ್ನ್ಸ್ ಸಲ್ಲಿಕೆ, ಮರುಪಾವತಿ, ಪ್ರಕರಣಗಳ ಆಯ್ಕೆ ಮತ್ತು ದೃಢೀಕರಣಕ್ಕೆ ಪ್ರಕರಣಗಳನ್ನು ಅಂತಿಮಪಡಿಸುವಲ್ಲಿ ಹೊಸ ವಿಧಾನಗಳನ್ನು ಅನುಸರಿಸಲಾಗುವುದು. ಒಂದು ವರ್ಷದ ಒಳಗಾಗಿ ಕೇವಲ ನಾಲ್ಕೇ ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ವಿತರಿಸುವ ವ್ಯವಸ್ಥೆ ಆರಂಭವಾಗಲಿದೆ” ಎಂದು ಹೇಳಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಶೇಕಡ 50ರಷ್ಟು ಹೆಚ್ಚಿ 6.08 ಕೋಟಿಯಷ್ಟು ತಲುಪಿದೆ ಎಂದು ಇದೇ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.

Comments are closed.