ರಾಷ್ಟ್ರೀಯ

ಹೆಂಡತಿ ಜೊತೆ ಜಗಳವಾಡಿ ಮಗಳ ಮೇಲೆ ಅತ್ಯಾಚಾರ

Pinterest LinkedIn Tumblr


ಗುರುಗ್ರಾಮ: 3 ವರ್ಷದ ಮಗಳ ಮೇಲೆ ತಂದೆಯೇ ಅತ್ಯಾಚಾರ ಎಸಗಿದ ಹೇಯ ಪ್ರಕರಣ ಹರಿಯಾಣಾದಲ್ಲಿ ನಡೆದಿದೆ.

28 ಮತ್ತು 29 ನವೆಂಬರ್ ನಡುವಿನ ರಾತ್ರಿ ಈ ದುಷ್ಕೃತ್ಯ ನಡೆದಿದ್ದು ಆರೋಪಿಯನ್ನು ನವೆಂಬರ್ 30ರಂದು ಬಂಧಿಸಲಾಗಿದೆ.

ಘಟನೆ ನಡೆದಾಗ ಮನೆಯಲ್ಲಿ ತಂದೆ ಮತ್ತು ಮಗಳು ಇಬ್ಬರೇ ಇದ್ದರು. ಮಗುವಿನ ತಾಯಿ ಗಂಡನೊಂದಿಗೆ ಜಗಳವಾಡಿಕೊಂಡು ಕಿರಿಯ ಮಗುವನ್ನೆತ್ತಿಕೊಂಡು ಹತ್ತಿರದಲ್ಲೇ ಇದ್ದ ಸಂಬಂಧಿಕರ ಮನೆಗೆ ಹೋಗಿದ್ದಳು ಎಂದು ತಿಳಿದುಬಂದಿದೆ.

ಮರುದಿನ ಬೆಳಗ್ಗೆ ಮನೆಗೆ ಹಿಂತಿರುಗಿದ ತಾಯಿ ಮಗಳು ಹಾಸಿಗೆ ಮೇಲೆ ಪ್ರಜ್ಞೆ ಕಳೆದುಕೊಂಡು ಬಿದ್ದಿರುವುದನ್ನು ನೋಡಿದ್ದಾಳೆ ಮತ್ತು ಸುತ್ತಲೂ ರಕ್ತದ ಕಲೆಯನ್ನು ಕಂಡಿದ್ದಾಳೆ. ಹೌಹಾರಿದ ಆಕೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದು ಸಾಬೀತಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದ್ದು ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.

ಕುಡಿದ ಮತ್ತಿನಲ್ಲಿ ಆರೋಪಿ ಈ ಕೃತ್ಯವನ್ನೆಸಗಿದ್ದಾನೆ. ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.