ರಾಷ್ಟ್ರೀಯ

ಅಸ್ಸಾಂ: ಇಂಟರ್​ಸಿಟಿ ರೈಲಿನಲ್ಲಿ ಬಾಂಬ್ ಸ್ಫೋಟ: 14 ಮಂದಿಗೆ ಗಾಯ

Pinterest LinkedIn Tumblr


ಬೆಂಗಳೂರು: ರೈಲೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಅಸ್ಸಾಮ್ ರಾಜಧಾನಿ ಗುವಾಹತಿಯಿಂದ ಸುಮಾರು 100 ಕಿಮೀ ದೂರದಲ್ಲಿರುವ ಉಡಲ್​ಗುರಿ ಜಿಲ್ಲೆಯ ಕತಲ್​ಗುರಿ ಗ್ರಾಮದಲ್ಲಿರುವ ಹರಿಸಿಂಗಾ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಸಂಜೆ 7ಕ್ಕೆ ಈ ದುರಂತ ಸಂಭವಿಸಿದೆ. ಕಾಮಾಖ್ಯ-ದೆಕಾರ್​ಗಾಂವ್ ಇಂಟರ್​ಸಿಟಿ ಎಕ್ಸ್​ಪ್ರೆಸ್ ರೈಲಿನ ನಾಲ್ಕನೇ ಬೋಗಿಯಲ್ಲಿ ಈ ಸ್ಫೋಟವಾಗಿದೆ. ಕೆಲ ವರದಿಗಳ ಪ್ರಕಾರ, ಸುಧಾರಿತ ಬಾಂಬ್ (ಇಡಿ) ಸ್ಫೋಟಗೊಂಡಿದೆ.

ಅಧಿಕಾರಿಗಳು ಮಾಹಿತಿ ಪ್ರಕಾರ, ಮೂವರು ವ್ಯಕ್ತಿಗಳು ಈ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ ಹಲವಾರು ಮಂದಿಗೆ ಗಂಭೀರ ಗಾಯಗಳಾಗಿವೆಯಂತೆ. 14 ಮಂದಿಗೆ ಗಾಯವಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ. ಒಬ್ಬನ ಸ್ಥಿತಿಯಂತೂ ಚಿಂತಾಜನಕವಾಗಿದ್ದು, ಸಾವು ಸಂಭವಿಸುವ ಅಪಾಯವಿದೆ ಎನ್ನಲಾಗಿದೆ. ಆದರೆ, ಅದೃಷ್ಟಕ್ಕೆ ಈವರೆಗೆ ಯಾವ ಸಾವು ಸಂಭವಿಸಿದ ಯಾವುದೇ ವರದಿಯಾಗಿಲ್ಲ.

ಅಸ್ಸಾಮ್ ಡಿಐಜಿ ಅನುರಾಗ್ ಅಗರ್ವಾಲ್ ನೇತೃತ್ವದ ಪೊಲೀಸರ ತಂಡವೊಂದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.

Comments are closed.