ರಾಷ್ಟ್ರೀಯ

ಕೇರಳದ 2ನೇ ಅತಿ ಎತ್ತರದ ಪರ್ವತ ಶ್ರೇಣಿ ಅಗಸ್ತ್ಯಕ್ಕೆ ಇನ್ನು ಮಹಿಳೆಯರೂ ಏರಬಹುದು: ಹೈಕೋರ್ಟ್‌

Pinterest LinkedIn Tumblr


ಕೊಚ್ಚಿ: ಕೇರಳದ 2ನೇ ಅತಿ ಎತ್ತರದ ಪರ್ವತ ಶ್ರೇಣಿ ಅಗಸ್ತ್ಯರ್‌ಕೂಟಂಗೆ (ಅಗಸ್ತ್ಯ ಪರ್ವತ) ಮಹಿಳೆಯರು ಚಾರಣ ಮಾಡಬಹುದು ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ.

ತಿರುವನಂತಪುರದ ನೆಯ್ಯಾರ್ ವನ್ಯಜೀವಿಧಾಮದಲ್ಲಿರುವ ಪರ್ವತದಲ್ಲಿ ಮಹಿಳೆಯರಿಗೆ ಚಾರಣ ಮಾಡಲು ಅವಕಾಶ ಇರಲಿಲ್ಲ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾ. ಅನು ಶಿವರಾಮನ್‌, ಚಾರಣದ ವೇಳೆ ಅನುಸರಿಸಬೇಕಾದ ನಿಯಮಗಳನ್ನು ರಾಜ್ಯ ಸರಕಾರ ಶೀಘ್ರ ರೂಪಿಸುವಂತೆ ಸೂಚಿಸಿದ್ದಾರೆ.

ಮಹಿಳೆಯರನ್ನೂ ಸೇರಿದಂತೆ 14 ಮಕ್ಕಳು ಅಗಸ್ತ್ಯರ್‌ಕೂಟಂನಲ್ಲಿ ಚಾರಣ ಮಾಡುವುದಕ್ಕೆ ಅನುಮತಿ ಇಲ್ಲ ಎಂದು ವನ್ಯಜೀವಿ ಇಲಾಖೆ ಆದೇಶಿಸಿತ್ತು.

ಈ ಸಂಬಂಧ ಅನೇಕ ಚಾರಣ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು. 2017ರ ಜನವರಿಯಲ್ಲಿ ಸಚಿವಾಲಯ ಸಭೆ ನಡೆಸಿ, ಅಗಸ್ತ್ಯರ್‌ಕೂಟಂನಿಂದ 8 ಕಿ.ಮೀ ದೂರದಲ್ಲಿರುವ ಅತ್ರಿಮಲೆ ವರೆಗೆ ಸಾಗಲು ಅನುಮತಿ ನೀಡಿತ್ತು. ಅಲ್ಲದೆ ಸೂಕ್ತ ನಿಯಮಗಳನ್ನು ರೂಪಿಸುವಂತೆ ಸಚಿವಾಲಯ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿತ್ತು. ಈ ಪ್ರದೇಶದಲ್ಲಿ ಬುಡಕಟ್ಟು ಜನಾಂಗ ವಾಸಿಸುತ್ತಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಮಹಿಳಾ ಸ್ವಾತಂತ್ರ್ಯ ಹಾಗೂ ಸಮಾನತೆ ಹಕ್ಕಿಗೆ ಧಕ್ಕೆಯಾಗಿರುವುದಾಗಿ ಸಂಘ ಸಂಸ್ಥೆಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Comments are closed.