ರಾಷ್ಟ್ರೀಯ

ಭಾರತದ ಪರಿವೀಕ್ಷಣಾ ಉಪಗ್ರಹ ಹೈಸಿಸ್ಲಾಂಗ್‌ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

Pinterest LinkedIn Tumblr

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದ್ದು, ಭಾರತದ ಪರಿವೀಕ್ಷಣಾ ಉಪಗ್ರಹ ಹೈಸಿಸ್ಲಾಂಗ್‌ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಹೈಸಿಸ್ಲಾಂಗ್ ಉಪಗ್ರಹವನ್ನು ಹೊತ್ತ ಭಾರತದ ಅತ್ಯಂತ ಯಶಸ್ವೀ ಉಡಾವಣಾ ನೌಕೆ ಪಿಎಸ್‍ಎಲ್‍ವಿ-ಸಿ43 ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಹೈಸಿಸ್ಲಾಂಗ್ ಉಪಗ್ರಹ ದೊಂದಿಗೆ ಇತರೆ 8 ದೇಶಗಳ 30 ಪುಟ್ಟಗ್ರಹಗಳನ್ನು ಕೂಡ ಉಡಾವಣೆ ಮಾಡಲಾಗಿದ್ದು, ಎಲ್ಲ ಉಪಗ್ರಹವನ್ನು ನೌಕೆಯ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ ಎನ್ನಲಾಗಿದೆ.

ಹೈಸಿಸ್ಲಾಂಗ್‌’, ಭೂ ಪರಿವೀಕ್ಷಣಾ ಉಪಗ್ರಹವಾಗಿದ್ದು, ಭೂ ಮೇಲ್ಮೈ ಅನ್ನು ಇನ್‌ಫ್ರಾರೆಡ್‌ ಮತ್ತು ಶಾರ್ಟ್‌ವೇರ್‌ ಇನ್‌ಫ್ರಾರೆಡ್‌ ಕಿರಣಗಳ ನೆರವಿನಿಂದ ಹತ್ತಿರದಿಂದ ಪರಿಶೀಲಿಸುವುದು ಇದರ ಕಾರ್ಯವಾಗಿದೆ. ಅಂತೆಯೇ ಖುದ್ದು ಇಸ್ರೊ ಅಭಿವೃದ್ಧಿಪಡಿಸಿರುವ ಈ ಉಪಗ್ರಹದ ಉಡ್ಡಯನದ ಪ್ರಧಾನ ಉಪಗ್ರಹವಾಗಿದ್ದು, ರಾಕೆಟ್‌ನ ಒಟ್ಟು ತೂಕ 380 ಕೆ.ಜಿ. ಇರಲಿದೆ. ಉಪಗ್ರಹವನ್ನು ಭೂಮಿಯಿಂದ 636 ಕಿ.ಮೀ. ಎತ್ತರದ ಕಕ್ಷೆಗೆ ಸೇರಿಸಲಾಗುವುದು. ಇದೇ ತಿಂಗಳಲ್ಲಿ ಇಸ್ರೊ ನಡೆಸುತ್ತಿರುವ 2ನೇ ಉಡ್ಡಯನ ಇದಾಗಿದೆ. ನ.14ರಂದು ಜಿಸ್ಯಾಟ್‌-29 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು.

Comments are closed.