ಅಂತರಾಷ್ಟ್ರೀಯ

ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಕಟ್ಟಡಕ್ಕೆ ಡಿಕ್ಕಿ ಹೊಡೆದ 179 ಮಂದಿ ಪ್ರಯಾಣಿಕರಿದ್ದ ಏರ್ ಇಂಡಿಯಾ; ಪ್ರಯಾಣಿಕರು ಪಾರು

Pinterest LinkedIn Tumblr

ಸ್ಟಾಕ್ ಹೋಮ್: 179 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಯಾವುದೇ ಸಾವು ನೋವುಗಳಾಗಿಲ್ಲ ಎಂದು ವರದಿಯಾಗಿದೆ.

ಭಾರತೀಯ ಸ್ಥಳೀಯ ಕಾಲಮಾನ ನಿನ್ನೆ ಅಪರಾಹ್ನ 4 ಗಂಟೆ 45 ನಿಮಿಷಕ್ಕೆ ಈ ಘಟನೆ ನಡೆದಿದೆ. ಏರ್ ಇಂಡಿಯಾ ವಿಮಾನ ತಂಗುವ ಟರ್ಮಿನಲ್ 5ರ 50 ಮೀಟರ್ ಮುಂದೆ ಈ ಘಟನೆ ನಡೆದಿದೆ.

ವಿಮಾನದ ರೆಕ್ಕೆ ಕಟ್ಟಡದ ದ್ವಾರಕ್ಕೆ ತಾಗಿತು. ವಿಮಾನದಲ್ಲಿದ್ದ ಎಲ್ಲಾ 179 ಮಂದಿ ಪ್ರಯಾಣಿಕರನ್ನು ಮೊಬೈಲ್ ಸ್ಟೇರ್ ಕೇಸ್ ನಲ್ಲಿ ಕೆಳಗಿಳಿಸಿ ನಂತರ ನಿಲ್ದಾಣಕ್ಕೆ ಪ್ರವೇಶ ನೀಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ.
ಕೆಲ ದಿನಗಳ ಹಿಂದೆ 136 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವಾಗ ಪರಿಧಿ ಗೋಡೆಗೆ ಡಿಕ್ಕಿ ಹೊಡೆದು ಅದೇ ಪರಿಸ್ಥಿತಿಯಲ್ಲಿ ದುಬೈಗೆ ಹೋಗಲೆಂದು 4 ಗಂಟೆಗಳ ಕಾಲ ಪ್ರಯಾಣ ನಡೆಸಿತ್ತು. ಈ ಘಟನೆಯಲ್ಲಿ ಕೂಡ ಯಾವುದೇ ಪ್ರಯಾಣಿಕರಿಗೆ ಅಪಾಯವಾಗಿರಲಿಲ್ಲ. ನಂತರ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಮುಂಬೈಗೆ ತಿರುಗಿಸಲಾಗಿತ್ತು.

Comments are closed.