ರಾಷ್ಟ್ರೀಯ

ಅರವಿಂದ್​ ಕೇಜ್ರಿವಾಲ್​ ಮುಖಕ್ಕೆ ಖಾರದ ಪುಡಿ ಎರಚಿದ ವ್ಯಕ್ತಿ

Pinterest LinkedIn Tumblr


ದೆಹಲಿ: ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮುಖಕ್ಕೆ ಖಾರದ ಪುಡಿ ಎರಚಲು ವ್ಯಕ್ತಿ ಮುಂದಾಗಿದ್ದು, ಆತನನ್ನು ಬಂಧಿಸಲಾಗಿದೆ.

ದೆಹಲಿಯ ಸೆಕ್ರೆಟರಿಯೆಟರ್​ನಲ್ಲಿದ್ದ ಅವರ ಕಚೇರಿಗೆ ಖಾರದ ಪುಡಿ ಸಮೇತವಾಗಿ ಆಗಮಿಸಿದ ವ್ಯಕ್ತಿ ಊಟದ ಸಮಯದಲ್ಲಿ ಅವರು ಕೊಠಡಿಯಿಂದ ಹೊರಬರುತ್ತಿದ್ದಂತೆ ಕೇಜ್ರಿವಾಲ್​ ಮುಖಕ್ಕೆ ಖಾರದ ಪುಡಿ ಎರಚಿದ್ದಾರೆ . ತಕ್ಷಣಕ್ಕೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಅನಿಲ್​ ಕುಮಾರ್​ ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕಾಗಿ ಆತ ಈ ಕಾರ್ಯ ಮಾಡಿದ್ದಾನೆ ಎಂದು ತಿಳಿದುಬಂದಿಲ್ಲ.

ಕೇಜ್ರಿವಾಲ್​ ಕನ್ನಡಕ ಇದ್ದಿದ್ದರಿಂದ ಅವರ ಕಣ್ಣುಗಳಿಗೆ ಹೆಚ್ಚಿನ ಹಾನಿಯಾಗಿದೆ. ಆತನನ್ನು ತಳ್ಳುವಾಗ ಕನ್ನಡಕ ನೆಲಕ್ಕೆ ಬಿದ್ದು ಹೊಡೆದಿದೆ. ಈ ವೇಳೆ ಆರೋಪಿಯನ್ನು ಸೆಕ್ಯೂರಿಟಿ ಗಾರ್ಡ್​ ಹಿಡಿದಿದ್ದಾರೆ.

ಈ ಘಟನೆಯನ್ನು ಆಮ್​ ಆದ್ಮಿ ಪಕ್ಷ ಖಂಡಿಸಿದ್ದು, ಇದು ಭದ್ರತಾ ವೈಫಲ್ಯವಾಗಿದ್ದು, ದೆಹಲಿ ಸಿಎಂ ಕಚೇರಿ ಕೂಡ ಸುರಕ್ಷಿತವಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಕೇಜ್ರಿವಾಲ್​ ಮುಖಕ್ಕೆ ಈ ಮುಂಚೆ ಕೂಡ ಮಸಿ ಬಳಿಯುವ ಯತ್ನ ನಡೆಸಲಾಗಿತು. ಹಾಗೂ ಹಿಂದೊಮ್ಮೆ ಕಾರ್ಯಕ್ರಮದಲ್ಲಿ ಒಬ್ಬ ವ್ಯಕ್ತಿ ಕಪಾಳಕ್ಕೆ ಹೊಡೆದಿದ್ದರು.

ಈ ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಸಲು ಉಪಮುಖ್ಯಮಂತ್ರಿ ಮನಿಶ್​ ಸಿಸೋಡಿಯಾ 4.30ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದಾರೆ.

Comments are closed.