ರಾಷ್ಟ್ರೀಯ

ಇಂದು ಪೆಟ್ರೋಲ್‌ ಡಿಸೇಲ್‌ 19 ಪೈಸೆ ಇಳಿಕೆ

Pinterest LinkedIn Tumblr


ದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸತತವಾಗಿ ಕುಸಿತಗೊಳ್ಳುತ್ತಿರುವ ಹಿನ್ನೆಲೆ ಶನಿವಾರವೂ ಕೂಡ ಡೀಸೆಲ್ ಬೆಲೆ ಇಳಿಕೆಯಾಗಿ ಗ್ರಾಹಕರ ಮೊಗದಲ್ಲಿ ನಗೆ ಮೂಡಿಸಿದೆ.

ದೆಹಲಿಯಲ್ಲಿ 1 ಲೀ. ಪೆಟ್ರೋಲ್‌ಗೆ 19 ಪೈಸೆ ಕಡಿಮೆಯಾಗುವ ಮೂಲಕ 76.91 ರೂ.ಗಳಷ್ಟಿದ್ದರೆ, ಡೀಸೆಲ್ ಲೀಟರ್‌ಗೆ 19 ಪೈಸೆ ಕಡಿಮೆಯಾಗಿ 71.74 ರು. ಗಳಿಗೆ ಮಾರಾಟವಾಗುತ್ತಿದೆ. ಬೆಂಗಳೂರು ಕೂಡ ಇಂಧನ ಬೆಲೆ ಇಳಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ 77.52 ರು. ಮತ್ತು ಡೀಸೆಲ್ ಲೀ.ಗೆ 72.12 ರು ಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಲೀ. ಪೆಟ್ರೋಲ್ 82.43 ರು.ಗಳಷ್ಟಿದ್ದು, ಡೀಸೆಲ್‌ 75.16 ರು. ಗೆ ಗ್ರಾಹಕರಿಗೆ ಸಿಗುತ್ತಿದೆ.

ಅಕ್ಟೋಬರ್ 16ರಂದು ಇಂಧನ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಅದಾದ ಬಳಿಕ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ ದೇಶಾದ್ಯಂತ ಕೆಲ ವಾರಗಳಿಂದ ಪೈಸೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಕಾಣುತ್ತಿದೆ.

Comments are closed.