ರಾಷ್ಟ್ರೀಯ

ಬಾಹ್ಯಾಕಾಶದಿಂದಲೂ ಕಾಣುವ ವಿಶ್ವದ ಅತಿ ಎತ್ತರದ ಪಟೇಲ್ ಏಕತಾ ಪ್ರತಿಮೆ!

Pinterest LinkedIn Tumblr


ನವದೆಹಲಿ: ಇದೇ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲ್ ರ ಜನ್ಮದಿನದ ನಿಮಿತ್ತ ವಿಶ್ವದಲ್ಲೇ ಅತಿ ಎತ್ತರದ 182 ಮೀಟರ್ ‘ಏಕತೆಯ ಪ್ರತಿಮೆ’ಯನ್ನು ಲೋಕಾರ್ಪಣೆಗೊಳಿಸಿದ್ದರು.

ಈಗ ಅಚ್ಚರಿಯೆಂದರೆ ಈಗ ಈ ಪ್ರತಿಮೆ ಬಾಹ್ಯಾಕಾಶದಿಂದಲೂ ನಿಮಗೆ ದರ್ಶನವಾಗುತ್ತದೆ ಅಂತೆ! ಅದು ನಿಮಗೆ ಈ ಸಂಗತಿ ಆಶ್ಚರ್ಯತರಿಸಿದರು ಕೂಡ ಸತ್ಯ. ಪ್ಲಾನೆಟ್ ಎನ್ನುವ ಜಗತ್ತಿನ ವಾಣಿಜ್ಯಾತ್ಮಕ ಉಪಗ್ರಹಗಳ ನೆಟ್ ವರ್ಕ್ ನ ಡಾಟ್ ಅಂಶಗಳನ್ನು ಹಂಚಿಕೊಳ್ಳುವ ಈ ಸಂಸ್ಥೆ ಈಗ ತನ್ನ ಟ್ವಿಟ್ಟರ್ ನಲ್ಲಿ ಬಾಹ್ಯಾಕಾಶದಿಂದ ಸೆರೆ ಹಿಡಿದಿರುವ ಮೂರ್ತಿಯನ್ನು ಹಂಚಿಕೊಂಡಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯ ಬಳಿ ನಿರ್ಮಿಸಿರುವ ಈ ಸರ್ದಾರ್ ಪಟೇಲ್ ಅವರ ಪ್ರತಿಮೆ ಚಿತ್ರವನ್ನು ಸ್ಕೈ‌ಸ್ಯಾಟ್ ನವೆಂಬರ್ 15ರಂದು ಸೆರೆ ಹಿಡಿದಿದೆ.

ಬುಡುಕಟ್ಟು ಜನರನ್ನು ಒಕ್ಕಲೆಬ್ಬಿಸಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಮೋದಿ ಸರ್ಕಾರದ ವಿರುದ್ದ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಕೂಡ ಸಾರ್ವಜನಿಕರ ತೆರಿಗೆಯನ್ನು ಮೂರ್ತಿ ನಿರ್ಮಿಸುವುದರ ಮೂಲಕ ಪೋಲು ಮಾಡಲಾಗಿದೆ ಎಂದು ಟೀಕಿಸಿದ್ದವು.

Comments are closed.