ರಾಷ್ಟ್ರೀಯ

ರಾಷ್ಟ್ರೀಯ ಲೋಕಸಮತಾ ಪಕ್ಷದಿಂದ ಎನ್​ಡಿಎ ಮೈತ್ರಿಕೂಟದಲ್ಲಿ  ಹೆಚ್ಚು ಸ್ಥಾನಗಳಿಗೆ ಪಟ್ಟು

Pinterest LinkedIn Tumblr


ನವದೆಹಲಿ: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿರುವಾಗ ಎನ್​ಡಿಎ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. 2019ರ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ನಡೆಯ ವಿರುದ್ಧ ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್​ಎಲ್​ಎಸ್​ಪಿ) ಅಧ್ಯಕ್ಷ ಉಪೇಂದ್ರ ಕುಶ್ವಾಹ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ತಮ್ಮ ಪಕ್ಷಕ್ಕೆ ನೀಡಿರುವ ಕ್ಷೇತ್ರಗಳು ಸಮರ್ಪಕವಾಗಿಲ್ಲ, ಕಡಿಮೆ ಸೀಟುಗಳನ್ನು ನೀಡಿದ್ದಾರೆ ಎಂದು ಕಡ್ಡಿ ಮುರಿದಂತೆ ಕುಶ್ವಾಹ ಹೇಳಿದ್ದಾರೆ.

ಶನಿವಾರ ಮಾಧ್ಯಮ ಗೋಷ್ಠಿ ನಡೆಸಿದ ಉಪೇಂದ್ರ ಕುಶ್ವಾಹ, ಬಿಜೆಪಿ ನಮಗೆ ಕೊಟ್ಟಿರುವ ಸೀಟುಗಳು ಗೌರವಾರ್ಹವಲ್ಲ. ಬಿಹಾರದೊಳಗೆ ಎನ್​​ಡಿಎ ಮಿತ್ರ ಪಕ್ಷಗಳ ಸೀಟು ಹಂಚಿಕೆ ಒಪ್ಪಂದದ ಬಗ್ಗೆ ಅಂತಿಮ ತೀರ್ಮಾನ ಆಗುವವರೆಗೂ ಏನೂ ಹೇಳುವುದಿಲ್ಲ ಎಂದು ಕುಶ್ವಾಹ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಬಿಜೆಪಿ ಆರ್​ಎಲ್​ಎಸ್​ಪಿಗೆ ಎಷ್ಟು ಸೀಟುಗಳನ್ನು ಕೊಟ್ಟಿದೆ ಎಂಬ ನಿಖರ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಅಲ್ಲದೇ ಇತ್ತೇಚೆಗೆ ಕುಶ್ವಾಹ ಮತ್ತು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ನಡುವಿನ ಸಂಬಂಧ ಕೂಡ ಹದಗೆಟ್ಟಿವೆ ಎನ್ನುತ್ತಿವೆ ಮೂಲಗಳು.

ಬಿಹಾರದ ಎನ್‌ಡಿಎ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು ಬಿಜೆಪಿಯ ಮೈತ್ರಿ ಪಕ್ಷ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಸ್ಥಾನ ಹಂಚಿಕೆ ಕುರಿತು ಹೊರಹಾಕಿದ ಅಸಮಾಧಾನದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 40 ಸ್ಥಾನಗಳ ಪೈಕಿ ತಲಾ 20 ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಯು ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ ನಮ್ಮ ಪಕ್ಷಕ್ಕೂ ಸ್ಪರ್ಧಿಸಲು ಅಧಿಕ ಸ್ಥಾನಗಳನ್ನು ನೀಡಬೇಕು ಎಂದು ಉಪೇಂದ್ರ ಕುಶ್ವಾಹ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಸಲ ನೀಡಿದ್ದ ಸ್ಥಾನಗಳಿಗಿಂತ ಈ ಬಾರಿ ಕಡಿಮೆ ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕಿದೆ. ಬಿಜೆಪಿ ನೀಡಿರುವ ಸ್ಥಾನಗಳ ಬಗ್ಗೆ ಪ್ರತಿಕ್ರಿಸಿರುವ ಉಪೆಂದ್ರ ಕುಶ್ವಾಹ ಅವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು ಎಂದು ಅಮಿತ್ ಶಾ ಅವರಲ್ಲಿ ಕುಶ್ವಾಹ ಮನವಿ ಮಾಡಿದ್ದಾರೆ.

ಇನ್ನು 40 ಸ್ಥಾನಗಳ ಪೈಕಿ ಜೆಡಿಯುಗೆ 20 ಸ್ಥಾನಗಳನ್ನು ನೀಡಿ, ಉಳಿದ 20ರಲ್ಲಿ ಆರ್‌ಎಲ್‌ಎಸ್‌ಪಿ, ಲೋಕ ಜನಶಕ್ತಿ ಪಕ್ಷ (ಎಲ್​ಜೆಪಿ) ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಬಿಜೆಪಿ 16 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಯೋಚಿಸಿದ್ದು, ಉಳಿದ ನಾಲ್ಕು ಸ್ಥಾನಗಳನ್ನು ಈ ಎರಡು ಪಕ್ಷಗಳಿಗೆ ನೀಡುವ ಸಾಧ್ಯತೆಗಳಿವೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿ 22, ಎಲ್‌ಜೆಪಿ 6, ಆರ್‌ಎಲ್‌ಎಸ್‌ಪಿ 3 ಸ್ಥಾನಗಳನ್ನು ಪಡೆದಿದ್ದವು.

Comments are closed.