ರಾಷ್ಟ್ರೀಯ

ಮಂಡಲ ಪೂಜೆಗೆ ತೆರೆದ ಶಬರಿಮಲೆ; ಮಹಿಳೆಯರಿಗೆ ಪ್ರವೇಶ?

Pinterest LinkedIn Tumblr


ಕೊಚ್ಚಿ: ಮಂಡಲ ಪೂಜೆ ಹಿನ್ನಲೆ ಇಂದು ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ಇಂದು ಸಂಜೆ 5 ಗಂಟೆಗೆ ತೆರೆಯಲಾಗಿದೆ.

ಎರಡು ತಿಂಗಳುಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದ್ದು, ಅಯ್ಯಪ್ಪ ದೇವರ ದರ್ಶನವನ್ನು ಭಕ್ತರು ಪಡೆಯಲಿದ್ದಾರೆ.

ಇಂದಿನಿಂದ 62ದಿನಗಳ ಲಾಲ ಮಂಡಲ ಪೂಜೆ ನಡೆಯಲಿದೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್​ ತೀರ್ಪು ನೀಡಿದ ಬಳಿಕ ಇದು ಮೂರನೇ ಬಾರಿ ದೇಗುಲ ಬಾಗಿಲು ತೆರೆಯಲಾಗಿದೆ. ಆದರೆ, ಇದುವರೆಗೂ ಯಾವುದೇ ಮಹಿಳೆಯರು ದೇವಾಲಯ ಪ್ರವೇಶ ಮಾಡಲು ಸಾಧ್ಯವಾಗಿಲ್ಲ.

ಈ ಹಿಂದೆ ಎರಡು ಬಾರಿ ದೇಗುಲ ಬಾಗಿಲು ತೆಗೆದಾಗ ಮಹಿಳೆಯರು ಪ್ರವೇಶಕ್ಕೆ ಎಷ್ಟೇ ಪಙ್ರಯತ್ನ ನಡೆಸಿದರೂ ಭಕ್ತರು ವಿರೋಧಿಸಿದ್ದರು. ದೇವಾಲಯಕ್ಕೆ 500 ಮೀಟರ್​ ದೂರದಲ್ಲಿರುವಾಗ ಇಬ್ಬರು ಮಹಿಳೆಯರನ್ನು ತಡೆದು ವಾಪಸ್ಸು ಕಳುಹಿಸಲಾಗಿತ್ತು. ಅಲ್ಲದೇ ಇದರಿಂದ ಮುಟ್ಟು ಮೀರಿದ ಮಹಿಳೆಯರ ಪ್ರವೇಶಕ್ಕೂ ಅಡ್ಡಿಯಾಗುತ್ತಿದ್ದು, ಅವರು ಕೂಡ ತಮ್ಮ ವಯಸ್ಸಿನ ದಾಖಲೆ ತೋರಿಸಿ ಎಂದು ಭಕ್ತರು ತಡೆಯಾಗುತ್ತಿದ್ದಾರೆ.

ಸುಪ್ರೀಂಕೋರ್ಟ್​ ತೀರ್ಪು ಹಿನ್ನೆಲೆ ಆನ್​ ಲೈನ್​ ಮೂಲಕ ದೇವರ ದರ್ಶನಕ್ಕೆ 700 ಮಹಿಳೆಯರ ನೋಂದಣಿಮಾಡಿಕೊಂಡಿದ್ದು, ಮಹಿಳೆಯರ ಪ್ರವೇಶಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಲೆ ಇದೆ. ಆದರೂ ಕೂಡ ಮಹಿಳೆಯರು ಪ್ರವೇಶಕ್ಕೆ ಮುಂದಾಗುತ್ತಲೆ ಇದ್ದಾರೆ.

ಮಹಿಳೆಯರ ಪ್ರವೇಶಕ್ಕೆ ಪಂದಳ ರಾಜವಂಶಸ್ಥರು, ಅರ್ಚಕರು, ಬಿಜೆಪಿ, ಆರ್​ಎಸ್​ಎಸ್​ ಭಾರೀ ವಿರೋಧ ವ್ಯಕ್ತಪಡಿಸಿದೆ. ಸುಪ್ರೀ ತೀರ್ಪಿನ ಹಿನ್ನಲೆ ದರ್ಶನಕ್ಕೆ ಆಗಮಿಸುವ ಮಹಿಳೆಯರಿಗೆ ಬಿಗಿ ಭದ್ರತೆ ನೀಡಲಾಗಿದೆ ಶಬರಿಮಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು ಪಟ್ಟಣಂತಿಟ್ಟ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಮಾಡಲಾಗಿದೆ.

ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ದರ್ಶನಕ್ಕೆ ಮಹಿಳೆಯರಿಗೆ ಪ್ರತ್ಯೇಕ ದಿನ ನಿಗದಿ ಪಡಿಸಲಾಗುವುದು ಎಂದು ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ತಿಳಿಸಿದ್ದರು.

Comments are closed.