ರಾಷ್ಟ್ರೀಯ

ಕನಿಷ್ಟ ಐದು ವರ್ಷಗಳ ಕಾಲ ಗಾಂಧಿ ಕುಟುಂಬದ ಹೊರತಾಗಿ ಯಾರನ್ನಾದರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಿಸಿ ತೋರಿಸಲಿ: ಮೋದಿ ಸವಾಲು

Pinterest LinkedIn Tumblr

ಅಂಬಿಕಾಪುರ: ಕನಿಷ್ಟ ಐದು ವರ್ಷಗಳ ಕಾಲ ಗಾಂಧಿ ಕುಟುಂಬದ ಹೊರತಾಗಿ ಯಾರನ್ನಾದರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಿ ತೋರಿಸಿ ಎಂದು ಕೈ ಪಾಳಯದ ನಾಯಕರಿಗೆ ಪ್ರಧಾನಿ ಮೋದಿ ಸವಾಲೆಸೆದಿದ್ದಾರೆ.

ಕನಿಷ್ಟ ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬಕ್ಕೆ ಸೇರಿಲ್ಲದವರನ್ನು ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿಸಿದರೆ ತಾನು ಪಂಡಿತ್ ಜವಾಹರಲಾಲ್ ನೆಹರೂ ನಿಜವಾಗಿಯೂ ಪ್ರಜಾತಂತ್ರ ವ್ಯವಸ್ಥೆಯ ನಿಜವಾದ ಕರ್ತೃ ಎಂದು ನಂಬುವೆನು ಎಂದು ಮೋದಿ ಹೇಳಿದ್ದಾರೆ.

ಛತ್ತೀಸ್ ಗಢದ ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿರುವ ಪ್ರಧಾನಿ ಶುಕ್ರವಾರ ನಡೆದ ಸಮಾವೇಶವೊಂದರಲ್ಲಿ “ನಾನು ಈ ಮೂಲಕ ಕೈ ನಾಯಕರಿಗೆ ಸವಾಲೆಸೆಯುತ್ತೇನೆ, ಗಾಂಧಿ ಕುಟುಂಬದ ಹೊರಗಿನ ಕೆಲ ಒಳ್ಳೆಯ ನಾಯಕರನ್ನು ಪಕ್ಷದ ರಾಷ್ಟ್ರಾಧ್ಯಕ್ಷರನ್ನಾಗಿ ಕನಿಷ್ಟ ಐದು ವರ್ಷಗಳ ಕಾಲ ನೇಮಕ ಮಾಡಿ ತೋರಿಸಿರಿ.ಹಾಗೆ ಮಾಡಿದರೆ ನಾನು ನೆಹರೂ ನಿಜವಾಗಿಯೂ ಇಲ್ಲಿ ಒಳ್ಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ರಚಿಸಿದ್ದರೆಂದು ನಂಬುತ್ತೇನೆ” ಎಂದರು.

ಕಾಂಗ್ರೆಸ್ ನ ನಾಲ್ಕು ತಲೆಮಾರು ದೇಶವನ್ನು ಆಳಿದೆ. ಆದರೆ ದೇಶಕ್ಕೆ ತಾವೇನನ್ನು ನೀಡಿದ್ದೇವೆನ್ನುವುದನ್ನು ಅವರು ಹೇಳಬೇಕು.ದೆಹಲಿ ಕೆಂಪುಕೋಟೆಯ ಅಖಾಡದಿಂದ ಮಾತನಾಡಲು ಕೇವಲ ಒಂದೇ ಕುಟುಂಬಕ್ಕೆ ಹಕ್ಕಿದೆ ಎನ್ನುವ ಅವರ ನಿಲುವನ್ನು ಜನರು ವಿರೋಧಿಸಿದ್ದಾರೆ.

ನೀವು ದೇಶದ ಬಡವರು ಎಂತಹಾ ಕಠಿಣ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದನ್ನು ಅರಿಯಲಾರಿರಿ. ಆದರೆ ಚಾಯ್ ವಾಲಾ ಇದನ್ನು ಅರಿತಿದ್ದಾನೆ ಎಂದು ಮೋದಿ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

“ಕಾಂಗ್ರೆಸ್ ಪಕ್ಷವು ತಮ್ಮಮನಸ್ಸಿನಲ್ಲಿ ಬೇರುಬಿತ್ಟಿರುವ ಸುಳ್ಳಿನ ಕಥೆಗಳನ್ನೇ ಹೇಳಿ ದೇಶವನ್ನು ಕತ್ತಲಲ್ಲಿರಿಸಿದ್ದಾರೆ.” ಅವರು ಹೇಳಿದ್ದಾರೆ.

“ಛತ್ತೀಸ್ ಗಢದಲ್ಲಿನ ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ, ಈ ಮೂಲಕ ಈ ರಾಜ್ಯದ ಜನ ನಕ್ಸಲರಿಗೆ ಬಲವಾದ ಉತ್ತರ ನೀಡಿದ್ದಾರೆ ಎಂದು ಮೋದಿ ಅಭಿಪ್ರಾಯಪಟ್ಟರು.

ನಕ್ಸಲ್ ಸಮಸ್ಯೆಯಿರುವ ರಾಜ್ಯ ಛತ್ತೀಸ್ ಗಢದಲ್ಲಿ ಇದೇ ನವೇಂಬರ್ 20ರಂದು ಎರಡನೇ ಹಂತದ ಚುನಾವಣೆ ಮಡೆಯಲಿದೆ.

Comments are closed.