ರಾಷ್ಟ್ರೀಯ

ಸಾವರ್ಕರ್‌ ವಿರುದ್ಧ ರಾಹುಲ್‌ ಹೇಳಿಕೆ: ಮೊಮ್ಮಗನಿಂದ ಮಾನನಷ್ಟ ಮೊಕದ್ದಮೆ

Pinterest LinkedIn Tumblr


ಹೊಸದಿಲ್ಲಿ: ರಾಹುಲ್‌ ಗಾಂಧಿಗೆ ಹೊಸ ಸಂಕಷ್ಟ ಎದುರಾಗಿದೆ. ವೀರ್‌ ಸಾವರ್ಕರ್‌ರ ಮೊಮ್ಮಗ ರಂಜಿತ್‌ ಸಾವರ್ಕರ್‌ ಎಐಸಿಸಿ ಅಧ್ಯಕ್ಷರ ವಿರುದ್ಧ ದೂರು ನೀಡಿದ್ದಾರೆ. ಛತ್ತೀಸ್‌ಗಢದಲ್ಲಿ ಚುನಾವಣಾ ರ‍್ಯಾಲಿ ವೇಳೆ ವಿನಾಯಕ್‌ ದಾಮೋದರ್‌ ಸಾವರ್‌ಕರ್‌ ಬಗ್ಗೆ ಮಾತನಾಡಿದ ರಾಹುಲ್‌, ಜೈಲಿನಿಂದ ಬಿಡುಗಡೆಯಾಗಲು ಅವರು ಬ್ರಿಟಿಷ್‌ ಆಡಳಿತಗಾರರ ಕ್ಷಮೆ ಕೋರಿದ್ದರು ಎಂದು ಆರೋಪಿಸಿದ್ದರು.

ಆದರೆ, ಇದು ಸುಳ್ಳು ಎಂದ ರಂಜಿತ್ ಸಾವರ್ಕರ್‌, ” ಸಾವರ್ಕರ್‌ ಅವರು 27 ವರ್ಷಗಳ ಕಾಲ ಜೈಲಿನಲ್ಲಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್‌ ದಾಖಲಿಸಿದ್ದೇನೆ” ಎಂದಿದ್ದಾರೆ.

” ತನ್ನನ್ನು ಬಿಡುಗಡೆಗೊಳಿಸಿದರೆ ಹಾಗೂ ಕ್ಷಮಿಸುವುದಾದರೆ ಕ್ಷಮೆ ಕೋರುವುದಾಗಿ ಬ್ರಿಟಿಷ್ ವಸಾಹತು ಆಡಳಿತಗಾರರಿಗೆ ಸಾವರ್ಕರ್ ಪತ್ರ ಬರೆದಿದ್ದರು” ಎಂದು ರಾಹುಲ್ ಗಾಂಧಿ ಛತ್ತೀಸ್‌ಗಢದಲ್ಲಿ ಹೇಳಿದ್ದರು. ಅಲ್ಲದೆ, ನಮ್ಮ ಪಕ್ಷಕ್ಕೆ ಯಾರೂ ದೇಶಭಕ್ತಿಯ ಬಗ್ಗೆ ಪಾಠ ಮಾಡುವ ಅಗತ್ಯವಿಲ್ಲ. ನನ್ನ ಕಾಂಗ್ರೆಸ್ ಪಕ್ಷದಲ್ಲಿ ಹುತಾತ್ಮರ ದೊಡ್ಡ ಸಾಲೇ ಇದೆ. ನಮ್ಮ ನಾಯಕರು 15 – 20 ವರ್ಷ ಜೈಲಿನಲ್ಲಿ ಕಾಲ ಕಳೆದಿದ್ದಾರೆ. ಆದರೆ, ನಿಮ್ಮ ಸಾವರ್ಕರ್‌ ಜೀ ಬಿಡುಗಡೆಗಾಗಿ ಬ್ರಿಟಿಷರಿಗೆ ಅಧೀನರಾಗಿದ್ದರು” ಎಂದು ಚುನಾವಣಾ ರ‍್ಯಾಲಿ ವೇಳೆ ಹೇಳಿದ್ದರು.

ಅಂಡಮಾನ್‌ ನಿಕೋಬಾರ್‌ ಜೈಲಿನಲ್ಲಿದ್ದ ವೀರ್ ಸಾವರ್ಕರ್‌ 1921ರಲ್ಲಿ ಸೆರೆವಾಸದಿಂದ ಮುಕ್ತಿ ಪಡೆದಿದ್ದರು.

Comments are closed.