ರಾಷ್ಟ್ರೀಯ

ತನ್ನ ಹೆಂಡತಿಗಾಗಿ ಮಿನಿ ತಾಜ್​ ಮಹಲ್​ ಕಟ್ಟಿ, ಮತ್ತೊಮ್ಮೆ ಪ್ರೀತಿ ಸಂದೇಶ ಸಾರಿದ 85ರ ವೃದ್ದ ! ಆದರೆ ಹೆಂಡತಿ ಮಾತ್ರ ಕೊನೆಗೂ ಉಳಿಯಲಿಲ್ಲ…!

Pinterest LinkedIn Tumblr

ಲಕ್ನೋ : ಆಗ್ರಾದಲ್ಲಿ ಶಹಜಹನ್ ತನ್ನ ಪ್ರೀತಿಯ ಹೆಂಡತಿಯ ನೆನಪಿಗೆ ತಾಜ್​ ಮಹಲ್​ ಕಟ್ಟಿ ಜಗತ್ತಿಗೆ ಪ್ರೀತಿ ಸಂದೇಶ ನೀಡಿದ. ಈಗ ಅದೇ ರಾಜ್ಯದಲ್ಲಿ ಮತ್ತೊಬ್ಬ 85ರ ಅಮರ ಪ್ರೇಮಿ ತನ್ನ ಹೆಂಡತಿಗಾಗಿ ಮಿನಿ ತಾಜ್​ ಮಹಲ್​ ಕಟ್ಟಿ, ಮತ್ತೊಮ್ಮೆ ಪ್ರೀತಿ ಸಂದೇಶ ಸಾರಲು ಸಿದ್ದರಾಗಿದದಾರೆ

ಫೈಜುಲ್​ ಹಸನ್​ ಖದ್ರಿ ಈ ಮಿನಿ ತಾಜ್​ ಮಹಲ್​ ನಿರ್ಮಾತೃ. ಬುಲಂದ್​ಶಾರ್​ನಲ್ಲಿ ತನ್ನ ಹೆಂಡತಿ ತಾಜ್​ ಮುಲ್ಲಿ ಬಿಬಿ ಗಾಗಿ ಈ ಕೆಲಸಕ್ಕೆ ಮುಂದಾಗಿದ್ದಾರೆ. 2012ರಲ್ಲಿ ಈ ತಾಜ್​ ಮಹಲ್​ ನಿರ್ಮಾಣ ಶುರು ಮಾಡಿರುವ ಖದ್ರಿಗೆ ಇದಕ್ಕಾಗಿ ತನ್ನ ಉಳಿತಾಯದ ಹಣವನ್ನೆಲ್ಲಾ ಸುರಿದಿದ್ದಾರೆ.

ಈತನ ಕಾರ್ಯ ಕಂಡು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಧನ ಸಹಾಯವನ್ನು ನೀಡಲು ಮುಂದಾಗಿದ್ದಾರೆ. ಆದರೆ ಈ ಹಣವನ್ನು ಖದ್ರಿ ನಿರಾಕರಿಸಿದ್ದು, ಈ ಹಣವನ್ನು ತಮ್ಮ ಗ್ರಾಮದಲ್ಲಿರುವ ಬಾಲಕಿಯರ ಶಾಲೆ ಅಭಿವೃದ್ಧಿಗೆ ಬಳಸುವಂತೆ ಮನವಿ ಮಾಡಿದ್ದಾರೆ. ಈ ಶಾಲೆಗೆ ಭೂಮಿಯನ್ನು ಕೂಡ ಖದ್ರಿ ಕೊಡಗೆ ನೀಡಿದ್ದಾರೆ.

ದುರಂತ ಎಂದರೆ, ತನ್ನ ಪ್ರೀತಿಯ ಅಗಾಧತೆಯನ್ನು ತನ್ನ ಹೆಂಡತಿಗೆ ತೋರಿಸಬೇಕು ಎಂದು ಕಾದಿದ್ದ ಖದ್ರಿಗೆ ಕಳೆದ ಗುರುವಾರ ಆಘಾತವೊಂದು ನಡೆದಿದೆ. ರಸ್ತೆ ಅಪಘಾತದಲ್ಲಿ ತನ್ನ ಮುದ್ದಿನ ಹೆಂಡತಿಯನ್ನು ಆತ ಕಳೆದುಕೊಂಡಿದ್ದಾನೆ. ಕಳೆದ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಖದ್ರಿ ಗಾಯಗೊಂಡರೆ, ಆತನ ಹೆಂಡತಿ ತಾಜ್​ ಮಲ್ಲಿ ಬಿಬಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಹೆಂಡತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದಿರಲು ಕುಟುಂಬ ನಿರ್ಧರಿಸಿದ್ದು, ಅಲ್ಲಿಯೇ ಆಕೆಯ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ.

Comments are closed.