ನವದೆಹಲಿ: ದೇಶ ಒಂದು ಸುತ್ತಿನ ನೋಟು ಅಮಾನ್ಯೀಕರಣ ನೋಡಿದೆ. ನೋಟು ಅಮಾನ್ಯೀಕರಣ ಮಾಡಿ ಎರಡು ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತೊಂದು ಗಂಭೀರ ಆರೋಪ ಮಾಡಿದೆ.
ಲೋಕಸಭಾ ಚುನಾವಣೆ ಎದುರಿನಲ್ಲಿ ಇರುವಾಗ ಕೇಂದ್ರ ಸರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 3.6 ಲಕ್ಷ ಕೋಟಿ ರೂ. ಹಣವನ್ನು ಯಾವುದಾದರೂ ಮಾರ್ಗದಿಂದ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರ ಸರಕಾರ ಹಣವನ್ನು ತನ್ನ ಬಳಕೆಗೆ ಉಪಯೋಗಿಸಿಕೊಳ್ಳಲು ಮುಂದಾಗಿದೆ. ತನ್ನ ಆಪ್ತ ಸ್ನೇಹಿತರಿಗೆ ಹಣ ಸಂದಾಯ ಮಾಡಲು ಮೋದಿ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಆರೋಪಿಸಿದ್ದಾರೆ.
ಡಿಮಾನಿಟೈಜೇಶನ್ ಯಾಕೆ ಮಾಡಿದ್ದೇವೆ ಎಂದು ಮೋದಿ ಹೇಳಿದ್ದರೋ ಅದರಲ್ಲಿ ಒಂದೂ ಸಾಧ್ಯವಾಗಿಲ್ಲ. ಶೇ. 1.5 ಜಿಡಿಪಿ ಕುಸಿದಿದೆ. ಈಗ ಮೋದಿ ಡಿಮಾನಿಟೈಜೇಶನ್ ಪಾರ್ಟ್ 2ಗೆ ಬೇರೆ ರೀತಿಯಲ್ಲಿ ಮುಂದಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
Comments are closed.