ರಾಷ್ಟ್ರೀಯ

ಹಣ ನೀಡಲಿಲ್ಲ ಎಂದು ತಂದೆಯನ್ನೇ ಕೊಂದ ಮಗ !

Pinterest LinkedIn Tumblr

ತೆಲಂಗಾಣ: ನಿವೃತ್ತಿ ನಂತರದ ಹಣವನ್ನು ನೀಡದ ಹಿನ್ನೆಲೆಯಲ್ಲಿ 22 ವರ್ಷದ ಮಗನೊಬ್ಬ ತನ್ನ ತಂದೆಯನ್ನೇ ಕೊಂದಿರುವ ಅಮಾನುಷ ಘಟನೆ ತೆಲಂಗಾಣದ ರಚಕೊಂಡಾ ಪ್ರದೇಶದಲ್ಲಿ ನಡೆದಿದೆ.

ಜಲಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಎಂಬಾತ 2017ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿ ನಿಧಿಯ ಉಳಿತಾಯದಿಂದ ಸುಮಾರು 6 ಲಕ್ಷ ರು ಹಣ ಬಂದಿತ್ತು. ಜೊತೆಗೆ ತಮ್ಮ ಹೆಸರಿನಲ್ಲಿದ್ದ ಜಮೀನನ್ನು 10 ಲಕ್ಷ ರೂ ಗೆ ಮಾರಾಟ ಮಾಡಿದ್ದರು.

ಕೃಷ್ಣಪ್ಪ ಅವರ ಮಗ ತರುಣ್ ಈ ಹಣವನ್ನು ಥನ್ನ ಇನ್ನಿಬ್ಬರು ಸಹೋದರಿಯರು ಸೇರಿದಂತೆ ಮೂವರಿಗೂ ಹಂಚುವಂತೆ ಕೇಳಿದ್ದ. ಆದರೆ ಕೃಷ್ಣಪ್ಪ ತನ್ನ ಬಳಿ 2 ಲಕ್ಷ ಹಣ ಇಟ್ಟುಕೊಂಡು ಉಳಿದ ಹಣವನ್ನು ಮೂವರಿಗೂ ಹಂಚಿದ್ದರು.

ಕೆಲ ದಿನಗಳ ನಂತರ ಕೃಷ್ಣಪ್ಪ ಬಳಿಯಿದ್ದ 2 ಲಕ್ಷ ರು ಹಣವನ್ನು ನೀಡುವಂತೆ ತರುಣ್ ಕಿರುಕುಳ ಆರಂಭಿಸಿದ. ಆದರೆ ಅದನ್ನು ನೀಡಲು ನಿರಾಕರಿಸಿದ ಕಾರಣ ರಾಡ್ ನಿಂದ ಕೃಷ್ಣ ತಲೆಗೆ ಹೊಡೆದಿದ್ದಾನೆ., ಈ ವೇಳೆ ಕೃಷ್ಣ ಪ್ರಜ್ಞಾಹೀನನಾಗಿ ಬಿದ್ದಿದ್ದು, ತರುಣ್ ಗೆ ಸಹೋದರಿಯರು ಬೆಂಬಲ ನೀಡಿದ್ದಾರೆ.

ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತದರೂ ಅಷ್ಟರಲ್ಲಾಗಲೇ ಕೃಷ್ಣ ಮೃತ ಪಟ್ಟಿದ್ದ, ಈ ಸಂಬಂಧ ಪ್ರಕರಣ ದಾಖಲಿಸಿಕೊಡಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

Comments are closed.