ನವದೆಹಲಿ: ಪುರುಷರ ಮೇಲಿನ ಅತ್ಯಾಚಾರ ಕೂಡ ಅಪರಾಧ ಎಂದು ಪರಿಗಣಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಈ ಕುರಿತು ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಈ ವಿಷಯದ ಬಗ್ಗೆ ಈಗ ಅರ್ಜಿ ಸ್ವೀಕರಿಸಲು ಸೂಕ್ತ ಸಮಯವಲ್ಲ ಎಂದು ತಿಳಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಈ ಅರ್ಜಿಯನ್ನು ತಿರಸ್ಕರಿಸಿದ್ದು ಈ ಸಮಯದಲ್ಲಿ ಈ ರೀತಿಯ ಅರ್ಜಿಗಳ ವಿಚಾರಣೆಗೆ ನ್ಯಾಯಾಲಯ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಕಾನೂನು ರೂಪಿಸುವುದು ಮತ್ತು ಅಪರಾಧ ಗುರುತಿಸುವುದು, ಶಿಕ್ಷೆಯನ್ನು ನೀಡುವ ಅಧಿಕಾರ ಶಾಸಕಾಂಗಕ್ಕೆ ಸಂಬಂಧಿಸಿದ್ದಾಗಿದೆ ಎಂದು ಕೂಡ ನ್ಯಾಯಾಲಯ ತಿಳಿಸಿದೆ.
ಈ ಅರ್ಜಿಯನ್ನು ವಾಪಸ್ಸು ಪಡೆಯಲು ವಕೀಲರು ಮನವಿ ಮಾಡಿದಾಗ , ನ್ಯಾ. ಗೋಗೊಯಿ, ಈ ಸಮಯದಲ್ಲಿ ಈ ರೀತಿಯ ಪ್ರಕರಣಗಳನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಈ ಅರ್ಜಿಯಲ್ಲಿ ಮಹತ್ವಪೂರ್ಣ ಅಂಶವಿಲ್ಲ ಎಂದಲ್ಲ. ಭವಿಷ್ಯದಲ್ಲಿ ಇದನ್ನು ಸ್ವೀಕರಿಸುವುದಿಲ್ಲ ಎಂದು ಕೂಡ ಹೇಳಲು ಸಾಧ್ಯವಿಲ್ಲ ಎಂದರು.
ಕ್ರಿಮಿನಲ್ ಜಸ್ಟೀಸ್ ಸೊಸೈಟಿ ಆಫ್ ಇಂಡಿಯಾ, ಪುರಷರು ಹಾಗೂ ತೃತೀಯ ಲಿಂಗಿಗಳ ಮೇಲಿನ ಅತ್ಯಾಚಾರವನ್ನು ಅಪರಾಧ ಎಂದು ಅತ್ಯಾಚಾರ ಕಾನೂನನ್ನು ಪರಿಗಣಿಸುವುದಿಲ್ಲ ಈ ಕುರಿತು ಪರಿಶೀಲನೆ ನಡೆಸಬೇಕು ಎಂದುಯ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು.
Comments are closed.