ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ಪ್ರಧಾನಿ ಆಗುತ್ತಾರೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಜನತಾ ಕಾಂಗ್ರೆಸ್ ಛತ್ತೀಸಗಢ್ (ಜೆಸಿಸಿ)ಯ ಅಜಿತ್ ಜೋಗಿ ಹೇಳಿದ್ದಾರೆ.
ಛತ್ತೀಸಗಢ ವಿಧಾನಸಭಾ ಚುನಾವಣೆ ಎದುರಿಸಲು ಬಿಎಸ್‍ಪಿ ಹಾಗೂ ಜೆಸಿಸಿ ಮೈತ್ರಿ ಸಿದ್ಧತೆ ನಡೆಸಿದೆ. ಹೀಗಾಗಿ ಅಜಿತ್ ಜೋಗಿ ನಾನೇ ಮುಖ್ಯಮಂತ್ರಿ ಆಗುತ್ತೇನೆ. ಈ ಮೂಲಕ ನಮ್ಮ ಮೈತ್ರಿ ಪಕ್ಷಗಳು ಹೆಚ್ಚು ಸ್ಥಾನ ಗಳಿಸಿದರೆ ಮಾಯಾವತಿ ಅವರು ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ಪಕ್ಷಗಳ ಮೇಲೆ ಮಾಯಾವತಿ ಅವರಿಗೆ ನಂಬಿಕೆ. ಹೀಗಾಗಿ ಅವರು ಪ್ರಾದೇಶಿಕ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡುತ್ತೇವೆ. ಈ ಮೈತ್ರಿಯಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಅಂತಾ ನಿರ್ಧಾರವಾಗಿಲ್ಲ. ಆದರೆ ಮಾಯಾವತಿ ಅವರೇ ಪ್ರಧಾನಿ ಅಭ್ಯರ್ಥಿ ಎನ್ನುವುದು ನನ್ನ ವೈಯಕ್ತಿಕ ವಿಚಾರ ಅಷ್ಟೇ. ದಲಿತ ಮಹಿಳೆಯಾಗಿರುವ ಮಾಯಾವತಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Comments are closed.