ರಾಷ್ಟ್ರೀಯ

151 ಮೀಟರ್​​​ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣಕ್ಕೆ ಯೋಗಿ ಚಿಂತನೆ

Pinterest LinkedIn Tumblr


ನವದೆಹಲಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​​ ಸರ್ಕಾರ ಅಯೋಧ್ಯೆಯಲ್ಲಿ 151 ಮೀಟರ್​​​ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಜೊತೆಗೆ ದೀಪಾವಳಿ ಹಬ್ಬದ ಮುನ್ನವೇ ಅಯೋಧ್ಯೆಗೆ ತೆರಳಲಿರುವ ಸಿಎಂ ಯೋಗಿ ಆದಿತ್ಯನಾಥ್​​ರು ಅಧಿಕೃತ ಆದೇಶ ಹೊರಡಿಸಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಶ್ರೀರಾಮನ ಪ್ರತಿಮೆಯ ವಿನ್ಯಾಸ/ವಾಸ್ತುಶಿಲ್ಪ ತಯಾರಿಕೆಗೆ ಟೆಂಡರ್​​ ಕರೆಯಲಾಗಿದೆ. ಈ ಬಗ್ಗೆ ಈಗಾಗಲೇ ಹಲವು ಕಂಪನಿಗಳು ಸಿಎಂ ಯೋಗಿ ಅದಿತ್ಯನಾಥ್​​​ರ ಮುಂಭಾಗ ವಿನ್ಯಾಸವನ್ನು ಪ್ರಸ್ತುತಪಡಿಸಿವೆ. ಇದರಲ್ಲಿ 151 ಮೀಟರ್​​ ಎತ್ತರದ ಪ್ರತಿಮೆಗೆ ಹೊಂದುವಂತಹ ವಿನ್ಯಾಸವನ್ನು ಅಂತಿಮಗೊಳಿಸಿ ತಿಳಿಸಲಾಗುವುದು ಎಂದು ಉತ್ತರಪ್ರದೇಶ ರಾಜಕೀಯ ನಿರ್ಮಾಣ ನಿಗಮದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನು ಉತ್ತಮ ವಿನ್ಯಾಸ ಮಾಡುವ ಕೆಲವು ಕಂಪನಿಗಳನ್ನು ಸಿಎಂ ಯೋಗಿ ಆದಿತ್ಯನಾಥ್​​ರಿಗೆ ನೀಡಲಾಗಿದೆ. ಅಲ್ಲದೇ ವಾಸ್ತುಶಿಲ್ಪ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳಿದ್ದರೇ ನೋಡಿ ಉತ್ತಮವಾದ ಪ್ರಸ್ತುತಿಯನ್ನು ಆಯ್ಕೆ ಮಾಡಿ ಕಂಪನಿಗಳಿಗೆ ಕಳಿಸಿಕೊಡಲಾಗುವುದು. ಕಂಪನಿಗಳ ಪ್ರಸ್ತುತಿಯನ್ನು ಸಿಎಂ ಯೋಗಿ ಅವರಿಗೆ ನೀಡಲು ಸದ್ಯದಲ್ಲೇ ದಿನಾಂಕ ನಿಗದಿಯಾಗುವುದು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

151 ಮೀಟರ್ ಎತ್ತರವಿರುವ ಪ್ರತಿಮೆಯ ಅಡಿಪಾಯ 50 ಮೀಟರ್ ಇರಲಿದೆ. ಹೀಗಾಗಿ ಪ್ರತಿಮೆಯ ಒಟ್ಟು ಎತ್ತರ 201 ಮೀಟರ್ ಆಗುವ ಸಾಧ್ಯತೆಯಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಮೆ ನಿರ್ಮಾಣಕ್ಕಾಗಿ ಅಂದಾಜು ₹775 ಕೋಟಿ ಮೌಲ್ಯದ ಟೆಂಡರ್ ಕರೆಯಲಾಗಿದೆ. ಈ ಟೆಂಡರ್​​​ಗೆ ಕೊಚ್ಚಿ, ಗ್ರೇಟರ್ ನೋಯ್ಡಾ ಮತ್ತು ಲಖನೌ ಮೂಲದ ಐದು ಸಂಸ್ಥೆಗಳು ಅರ್ಜಿ ಹಾಕಿವೆ ಎಂದು ಹೇಳಲಾಗಿದೆ.

ಕಳೆದ ವರ್ಷವೇ ದೀಪಾವಳಿಯಂದು ಅಯೋಧ್ಯೆಯಲ್ಲಿ ದೀಪೋತ್ಸವ ನಡೆಸಲಾಗಿತ್ತು. ಸರೆಯು ನದಿ ತೀರದಲ್ಲಿ ಸ್ಥಾಪನೆಯಾಗಲಿರುವ ವಿಗ್ರಹವನ್ನು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯಡಿ ನಿರ್ಮಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಈ ದೀಪಾವಳಿ ವೇಳೆಗೆ ಅಯೋಧ್ಯೆಯಲ್ಲಿ 151 ಅಡಿ ಎತ್ತರದ ಶ್ರೀರಾಮ ದೇವರ ವಿಗ್ರಹಕ್ಕೆ ಸಿಎಂ ಯೋಗಿ ಆದಿತ್ಯನಾಥ್‌ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಘೋಷಿಸಲಾಗಿತ್ತು.

ವಿಗ್ರಹ ಸ್ಥಾಪನೆಯ ಸ್ಥಳದ ಆಯ್ಕೆಗಾಗಿ ಫಾಜಿಯಾಬಾದ್‌ ಡಿಸ್ಟ್ರಿಕ್ಟ್‌ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಕ್ವೀನ್‌ ಹು ಸ್ಮರಣಾರ್ಥ ಇರುವ ಜಾಗದಲ್ಲಿ ವಿಗ್ರಹ ನಿರ್ಮಿಸಲು ಸಮಿತಿ ಶಿಫಾರಸು ನೀಡಿದೆ ಎನ್ನಲಾಗಿದೆ. ಈ ಶಿಫಾರಸು ಸರಕಾರದ ಮಟ್ಟದಲ್ಲಿ ಚರ್ಚೆಯಾದ ಬಳಿಕ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.

Comments are closed.