ನವದೆಹಲಿ: ಪ್ರಧಾನಿ ಮೋದಿಯನ್ನ ಹಕ್ಕಿಯ ಹಿಕ್ಕೆಗೆ ಹೋಲಿಸಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ದೇಶದ ಪ್ರಧಾನಿಯನ್ನ ರಮ್ಯಾ ಮತ್ತೆ ಅವಮಾನಿಸಿದ್ದಾರೆ ಅಂತಾ ನೆಟ್ಟಿಗರು ರಮ್ಯಾರಿಗೆ ತರಾಟೆ ತೆಗೆದುಕೊಂಡ ಬೆನ್ನಲ್ಲೇ ಟ್ವಿಟರ್ ನಲ್ಲಿ ಮತ್ತೆ ಪ್ರತ್ಯಕ್ಷರಾಗಿರುವ ರಮ್ಯಾ, ತಮ್ಮದೇ ವರಸೆಯಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ತಮ್ಮ ಟ್ವೀಟ್ ಕುರಿತಂತೆ ಸ್ಪಷ್ಟನೆ ಕೇಳಿದ್ದ ಬಿಜೆಪಿ ಕಾರ್ಯಕರ್ತರಿಗೆ ತಿರುಗೇಟು ನೀಡಿರುವ ರಮ್ಯಾ, ತಾವು ಯಾವುದೇ ಸ್ಪಷ್ಟನೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
‘ನೀವು ನಿಮ್ಮ ಎದೆಯುಸಿರನ್ನ ದೀರ್ಘವಾಗಿ ಹಿಡಿದು ಕನ್ನಡಿ ಮುಂದೆ ನಿಮ್ಮಷ್ಟಕ್ಕೆ ನೋಡಿಕೊಳ್ಳಿ. ನನ್ನ ಆಲೋಚನೆಗಳು ನನ್ನದು. ನಿಮ್ಮ ಲೇವಡಿಗಳಿಗೆ ನಾನು ಏನೂ ಹೇಳಲ್ಲ. ಈ ಬಗ್ಗೆ ನಾನು ಯಾವುದೇ ಕ್ಲ್ಯಾರಿಫಿಕೇಷನ್ ಕೊಡಲ್ಲ. ಯಾಕಂದ್ರೆ ನೀವು ಆ ಅರ್ಹತೆ ಹೊಂದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ರಮ್ಯಾ ಟ್ವೀಟ್ ಗೆ ಕೆಲವರು ನೀವು ಈ ಬಗ್ಗೆ ಸ್ಪಷ್ಟನೆ ಕೊಡಲೇ ಬೇಕು ಎಂದು ಹೇಳಿದಾಗ ‘Not my circus, not my monkeys’ (ಮಂಗಗಳೂ ನನ್ನವಲ್ಲ, ಸರ್ಕಸ್ ಕೂಡ ನನ್ನದಲ್ಲ) ಎಂದು ಟ್ವೀಟಿಸಿ ಟೀಕಾಕಾರರ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಇಂಗ್ಲಿಷ್ ವಾಹಿನಿಯ ವರದಿಗಾರ್ತಿಯೊಬ್ಬರು ಅಂದರೆ ನೀವು ಮತದಾರರನ್ನು ಮಂಗ ಎಂದು ಕರೆದಿರಾ? ಎಂದು ಕೇಳಿದ್ದಕ್ಕೆ, ಅವರ ವಿರುದ್ಧವೂ ವೈಯಕ್ತಿಕ ಟ್ವೀಟ್ ದಾಳಿಯನ್ನು ರಮ್ಯಾ ನಡೆಸಿದ್ದು ಹಲವು ಚರ್ಚೆಗೆ ಕಾರಣವಾಗಿದೆ.
Comments are closed.