
ಪಟ್ನಾ: ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿರುವ ಪೊಲೀಸ್ ಪೇದೆಗಳೆ ಇಲಾಖೆ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದ್ದು, ಕಾನೂನು ಕ್ರಮವನ್ನು ಮುರಿದಿರುವ ಘಟನೆ ಇಲ್ಲಿ ನಡೆದಿದೆ.
ಅನಾರೋಗ್ಯಕ್ಕೆ ಒಳಗಾದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗೆ ರಜೆ ನೀಡದ ಹಿನ್ನಲೆ ಆಕೆ ಸಾವನ್ನಪ್ಪಿದ್ದು, ಇದಕ್ಕೆ ಹಿರಿಯ ಅಧಿಕಾರಿಗಳೇ ಕಾರಣ ಎಂದು ನೂರಾರು ಪೊಲೀಸ್ ಕಾನ್ಸ್ಟೇಬಲ್ಗಳು ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಮಹಿಳಾ ಕಾನ್ಸ್ಟೇಬಲ್ ಸಾವನ್ನಪ್ಪಿದರಿಂದ ರೊಚ್ಚಿಗೆದ್ದ ಪೊಲೀಸ್ ಪೇದೆಗಳು ಅಧಿಕಾರಿಗಳ ದುರ್ವತನೆಯೇ ಇದಕ್ಕೆ ಕಾರಣ ಎಂದು ಎಸ್ಪಿ ಅಧಿಕಾರಿ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಪ್ರತಿಭಟನಾಕಾರ ಪೇದೆಗಳು ಎಸ್ಪಿ ಹಾಗೂ ಡಿವೈಎಸ್ಪಿಯನ್ನು ಅಟ್ಟಾಡಿಸಿ ಥಳಿಸಿದ್ದು, ಅವರಿಂದ ತಪ್ಪಿಸಿಕೊಳ್ಳಲು ಹರಸಾಹಸ ನಡೆಸಿದ್ದಾರೆ.
ಈ ಘಟನೆ ಬಿಹಾರ ಪೊಲೀಸ್ ಇಲಾಖೆಗೆ ತೀವ್ರ ಮುಜುಗರವನ್ನು ಉಂಟು ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತೇವೆ. ಶಾಂತಿಯಿಂದ ವರ್ತಿಸುವಂತೆ ಪೇದೆಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ಧಾರೆ.
Comments are closed.