ರಾಷ್ಟ್ರೀಯ

ಒಂದು ತಿಂಗಳಿಗೆ ಜಿಎಸ್ಟಿ ಸಂಗ್ರಹವಾಗಿದ್ದು ಒಂದು ಲಕ್ಷ ಕೋಟಿ: ಅರುಣ್ ಜೇಟ್ಲಿ

Pinterest LinkedIn Tumblr


ನವದೆಹಲಿ: ಕೇವಲ ಅಕ್ಟೋಬರ್ ತಿಂಗಳಿನಲ್ಲಿ ಒಂದು ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ನಲ್ಲಿ 94,442 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಈ ವರ್ಷ ಏಪ್ರಿಲ್ನಲ್ಲಿ ಮೊದಲ ಬಾರಿಗೆ ಜಿಎಸ್ಟಿ ಸಂಗ್ರಹವು ಒಂದು ಲಕ್ಷ ಕೋಟಿ ರೂ. ತಲುಪಿದೆ. ಅಂದಿನಿಂದ, ಇದು 90 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಸಂಗ್ರಹವಾಗಿದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, “2018 ರ ಅಕ್ಟೋಬರ್ನಲ್ಲಿ ಜಿಎಸ್ಟಿ ಸಂಗ್ರಹವು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದಕ್ಕೆ ಮುಖ್ಯ ಕಾರಣ, ಕಡಿಮೆ ಸರಕು ಮತ್ತು ಸೇವಾ ತೆರಿಗೆ, ಒಂದೇ ತೆರಿಗೆ ಕಾನೂನು. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ತಿಂಗಳು ಒಂದು ಲಕ್ಷ ಕೋಟಿ ರೂಪಾಯಿಗಳ ಜಿಎಸ್ಟಿ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ” ಎಂದಿದ್ದಾರೆ

ಮೇ ತಿಂಗಳಲ್ಲಿ 94,016 ಕೋಟಿ ರೂ., ಜೂನ್ ತಿಂಗಳಲ್ಲಿ 9,610 ಕೋಟಿ ರೂ., ಜುಲೈನಲ್ಲಿ 96,483 ಕೋಟಿ ರೂ., ಆಗಸ್ಟ್ನಲ್ಲಿ 93,960 ಕೋಟಿ ರೂ. ಮತ್ತು ಸೆಪ್ಟೆಂಬರ್ನಲ್ಲಿ 94,442 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

Comments are closed.