ರಾಷ್ಟ್ರೀಯ

ಸುಭಾಷ್​ಚಂದ್ರ ಬೋಸ್​ ವಂಶಸ್ಥರಿಂದ ನೇತಾಜಿ ಪ್ರತಿಮೆಗೆ ಬೇಡಿಕೆ

Pinterest LinkedIn Tumblr


ಕೋಲ್ಕತ: ನಿನ್ನೆಯಷ್ಟೇ ಗುಜರಾತ್‍ನಲ್ಲಿ ಸರ್ದಾರ್​ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಉದ್ಘಾಟನೆಯಾಗಿದೆ. ಈ ಕುರಿತು ಪರ-ವಿರೋಧದ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ವಂಶಸ್ಥರು ಬೋಸ್​ ಪ್ರತಿಮೆ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಬೇಡಿಕೆಯಿಟ್ಟಿದ್ದಾರೆ.

ಸುಭಾಷ್​ಚಂದ್ರ ಬೋಸ್​ ಭಾರತಕ್ಕೆ ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಹೀಗಾಗಿ, ನವದೆಹಲಿಯ ಇಂಡಿಯಾ ಗೇಟ್ ಆವರಣದಲ್ಲಿ ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸಿ ಬೋಸ್​ ಅವರ ಜನ್ಮದಿನವಾದ ಜನವರಿ 23 ವಿಮೋಚನಾ ದಿನ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಸಿಎಂ ಆಗಿದ್ದಾಗ ಕಂಡ ಕನಸು ಪ್ರಧಾನಿಯಾದ ಬಳಿಕ ಈಡೇರಿದೆ; ಪುತ್ಥಳಿ ಅನಾವರಣಗೊಳಿಸಿ ಮನದಾಳದ ಮಾತು ಹಂಚಿಕೊಂಡ ಮೋದಿ

ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ 182 ಮೀ. ಎತ್ತರದ ಪ್ರತಿಮೆ ಅನಾವರಣಗೊಳಿಸಿರುವಂತೆ ಸುಭಾಷ್​ಚಂದ್ರ ಬೋಸ್​ ಅವರಿಗೆ ಸಲ್ಲಬೇಕಾದ ಗೌರವವನ್ನೂ ದೊರಕಿಸಿಕೊಡಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಏಕತಾ ಪ್ರತಿಮೆ ನಿರ್ಮಾಣದಲ್ಲಿ ಧೈರ್ಯ ತೋರಿದೆ. ಅದೇರೀತಿ ಮುಂದಿನ ವರ್ಷ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ವಿಮೋಚನಾ ದಿನವೆಂದು ಘೋಷಿಸಬೇಕು. ಜೊತೆಗೆ ಅವರ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ನೇತಾಜಿ ಸೋದರನ ಮೊಮ್ಮಗ ಚಂದ್ರಕುಮಾರ್ ಬೋಸ್ ಟ್ವೀಟ್ ಮಾಡಿದ್ದಾರೆ.

#NDAGOVT under the leadership of @narendramodi ji kept its commitment by unveiling #SardarVallabhaiPatel’s statue on31Oct2018&celebrating theday as #UnityDay.Demand rising tounveil a statue ofthe #LiberatorofIndia-on23Jan’19 at #IndiaGate Delhi&declare the day as #LiberationDay pic.twitter.com/sYHPOpxNps

— Chandra Kumar Bose (@Chandrabosebjp) November 1, 2018

Comments are closed.