ರಾಷ್ಟ್ರೀಯ

49ನೇ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಯಾರ ಬಗ್ಗೆ ಹೇಳಿದ್ದಾರೆ ನೋಡಿ…

Pinterest LinkedIn Tumblr

ನವದೆಹಲಿ: ಭಾರತದ ಮೊದಲ ಗೃಹ ಮಂತ್ರಿ ಹಾಗೂ ಉಕ್ಕಿನ ಮನುಷ್ಯರೆಂದೇ ಖ್ಯಾತರಾಗಿದ್ದ ಸರ್ಕಾರ್ ಪಟೇಲ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 49ನೇ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಹಾಡಿ ಹೊಗಳಿದ್ದಾರೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಮಹಾ ದಾರ್ಶನಿಕ ವ್ಯಕ್ತಿ. ಸ್ವಾತಂತ್ರ್ಯಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಅ.31 ರಂದು ಪಟೇಲ್ ಅವರ ಜನ್ಮ ದಿನವಾಗಿದ್ದು, ಅಂದು ನಮ್ಮ ದೇಶದ ಯುವಕರು ‘ರನ್ ಫಾರ್ ಯುನಿಟಿ’ಯಲ್ಲಿ ಭಾಗಿಯಾಗಬೇಕು. ‘ರನ್ ಫಾರ್ ಯುನಿಟಿ’ಯಲ್ಲಿ ಪಾಲ್ಗೊಳ್ಳುವಂತೆ ಪ್ರತೀಯೊಬ್ಬರಿಗೂ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ.

ಈ ಬಾರಿ ಪಟೇಲ್ ಅವರ ಜನ್ಮ ದಿನಾಚರಣೆ ಅತ್ಯಂತ ವಿಶೇಷ ದಿನವಾಗಿದೆ. ಪಟೇಲ್ ಅವರ ಜನ್ಮದಿನಾಚರಣೆಯಂದು ನರ್ಮದಾ ನದಿ ಬಳಿ ನಿರ್ಮಾಣಗೊಂಡಿರುವ ಸ್ಟ್ಯಾಚು ಆಫ್ ಯುನಿಟಿಯನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇವೆ. ಈ ಪ್ರತಿಮೆ ಅಮೆರಿಕಾದ ಸ್ಟ್ಯಾಚು ಆಫ್ ಲಿಬರ್ಟಿಗಿಂದಲೂ ಎರಡು ಪಟ್ಟು ಎತ್ತರವನ್ನು ಹೊಂದಿದೆ. ಸರ್ದಾರ್ ರಂತೆ ಅವರ ಪ್ರತಿಮೆ ಕೂಡ ಭಾರತದ ಹೆಮ್ಮೆಯಾಗಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಅವರ ಸಂದರ್ಶನದ ಕುರಿತಂತೆ ಮಾತನಾಡಿದ ಪ್ರಧಾನಿ ಮೋದಿಯವರು, ವೀರ ಯೋಧರಿಗೆ ಸೆಲ್ಯೂಟ್ ಹೊಡೆದಿದ್ದಾರೆ.

ಈ ಬಾರಿಯ ನವೆಂಬರ್ 11 ರಂದು ವಿಶೇಷ ದಿನವಾಗಿದೆ. ಅಂದು ಮೊದಲನೇ ವಿಶ್ವ ಯುದ್ಧ ನಡೆದು 100 ವರ್ಷಗಳಾಗುತ್ತವೆ. ನಮ್ಮ ಯೋಧರು ಯುದ್ಧದಲ್ಲಿ ಸಾಕಷ್ಟು ತ್ಯಾಗ ಹಾಗೂ ಬಲಿದಾನ ಮಾಡಿದ್ದರು. ಯುದ್ಧ ನಡೆದಾಗ ನಾವು ಎರಡನೆಯವರಾಗಿರುತ್ತೇವೆಂಬುದನ್ನ ನಮ್ಮ ಯೋಧರು ಇಡೀ ವಿಶ್ವಕ್ಕೆ ತೋರಿಸಿದ್ದರು ಎಂದು ಹೇಳಿದ್ದಾರೆ.

ಇದೇ ವೇಳೆ ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಅಪ್ರತಿಮ ಸಾಧನೆ ಪ್ರದರ್ಶಿಸಿದ ಭಾರತೀಯ ಕ್ರೀಡಾಪಟುಗಳನ್ನು ಮೋದಿ ಕೊಂಡಾಡಿದ್ದಾರೆ.

Comments are closed.