ರಾಷ್ಟ್ರೀಯ

ಪ್ರಿಯಕರನಿಗಾಗಿ ಪತಿಯ ಹತ್ಯೆಗೆ ಯತ್ನಿಸಿ ವಿಫಲವಾದ ಮಹಿಳೆ: ಈ ಕುರಿತು ಒಂದು ರೋಚಕ ಪ್ರೇಮಕಥೆ

Pinterest LinkedIn Tumblr


ನವದೆಹಲಿ: ಪ್ರಿಯಕರನಿಗಾಗಿ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಲ್ಲಲ್ಲು ಯತ್ನಿಸಿದ ಅಮಾನುಷ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ. ತಮಿಳುನಾಡು ಮೂಲದ ಕದಿರವೇಲು ಎಂಬಾತನನ್ನು ತನ್ನ ಹೆಂಡತಿ ಅನಿತಾ ಎಂಬಾಕೆ ಪ್ರಿಯಕರನ ಜೊತೆಸೇರಿ ಹತ್ಯೆಗೈಯ್ಯಲು ಯತ್ನಿಸಿದ್ದಾಳೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳ ಹಿಂದೆ ಕುಟುಂಬದ ಒತ್ತಡಕ್ಕೆ ಮಣಿದು ಇಷ್ಟವಿಲ್ಲದಿದ್ದರೂ ಅನಿತಾ ಕದಿರುವೇಲು ಎಂಬಾತನನ್ನು ವಿವಾಹವಾಗಿದ್ದಾಳೆ. ಮದುವೆ ನಂತರವೂ ತನ್ನ ಪ್ರಿಯಕರ ಜಾಕ್ಸನ್​​ ಎಂಬುವವನ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದಾಳೆ. ಆದರೆ, ಇಬ್ಬರ ಪ್ರೀತಿಗೂ ಕದಿರುವೇಲೆ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಕದಿರವೇಲುನನ್ನು ಕೊಲ್ಲಲ್ಲು ಅನಿತಾ ಮತ್ತು ಜಾಕ್ಸನ್​​ ಭಾರೀ ಸಂಚು ಹೂಡಿದ್ದರು. ಈ ಕಾರಣಕ್ಕಾಗಿಯೇ ಕಳೆದ ಶನಿವಾರ ಅನಿತಾ ಕದಿರುವೇಲುನನ್ನು ಚೆನ್ನೈ ಬಳಿಯ ಬೀಚ್​ವೊಂದಕ್ಕೆ ಕರೆದೊಯ್ದಳು. ಈ ವೇಳೆ ಕಿಡಿಗೇಡಿಗಳ ಗುಂಪೊಂದು ಕದಿರುವೇಲು ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಕದಿರುವೇಲು ಕೊಲೆಗೆ ಯತ್ನಿಸಿದ್ದು, ಅನಿತಾ ಕೊರಳಿನಲಿದ್ದ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದರು ಎನ್ನಲಾಗಿತ್ತು.

ಬಳಿಕ ಹಲ್ಲೆಗೊಳಗಾಗಿದ್ದ ಕದಿರುವೇಲು ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ನಂತರ ತನಿಖೆಗೆ ಮುಂದಾದ ಪೊಲೀಸರಿಗೆ ಕದಿರುವೇಲೆ ಹಲ್ಲೆಯ ಹಿಂದಿನ ಸತ್ಯ ಬಯಲಾಗಿದೆ.

ಪ್ರಕರಣ ತನಿಖೆಯ ಆರಂಭದಲ್ಲಿಯೇ ಪೊಲೀಸರಿಗೆ ಅನಿತಾಳ ಮೇಲೆ ಅನುಮಾನ ಶುರುವಾಗಿದೆ. ಶಂಕಿತ ಅನಿತಾ ಮೊಬೈಲ್​​ ಕಾಲ್​​ ರೆಕಾರ್ಡ್ಸ್​​ ಡೀಟೆಲ್ಸ್​​ಗಳನ್ನು​ ಪೊಲೀಸರು ಪರಿಶಿಲೀಸಿದ್ದಾರೆ. ಈ ವೇಳೆ ಅನಿತಾ ಜಾಕ್ಸನ್​ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ತಿಳಿದು ಬಂದಿದೆ. ಈ ಆಧಾರದ ಮೇರೆಗೆ ಅನಿತಾ ಜೊತೆಗೆ ಆಕೆಯ ಪ್ರಿಯಕರ ಜಾಕ್ಸನ್​​ ಅವರನ್ನು ಬಂಧಿಸಿ, ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ಧಾರೆ.

ವಿಚಾರಣೆ ವೇಳೆ ಜಾಕ್ಸನ್​​​, ತಾನು ಮತ್ತು ಅನಿತಾ ಕದಿರುವೇಲು ಅವರನ್ನು ಕೊಲ್ಲಲ್ಲು ಯತ್ನಿಸಿದೆವು ಎಂದು ಹೇಳಿದ್ಧಾನೆ. ಈ ಕಾರಣಕ್ಕಾಗಿಯೇ ಚೆನ್ನೈ ಬೀಚ್​ ಬಳಿ ಕದಿರುವೇಲುನನ್ನು ಮುಗಿಸಲು ಮುಂದಾದೆವು, ಆದರೆ ಅದೃಷ್ಟವಶಾತ್​​ ಪ್ರಾಣಪಾಯದಿಂದ ಆಕೆಯ ಗಂಡ ಪಾರಾಗಿದ್ದಾನೆ. ಇದು ಪೂರ್ವನಿಯೋಜಿತ ಹಲ್ಲೆ ಎಂದು ಪೊಲೀಸರ ಬಳಿ ಜಾಕ್ಸನ್​​ ಬಾಯಿಬಿಟ್ಟಿದ್ಧಾನೆ.

ಇದೀಗ ಪೊಲೀಸರು ಜಾಕ್ಸನ್ ಮತ್ತು ಕದಿರುವೇಲು ಹೆಂಡತಿಯನ್ನು ಬಂಧಿಸಿದ್ದಾರೆ. ಅಲ್ಲದೇ ಬೀಚ್​​ ಬಳಿ ಕಿಡಿಗೇಡಿಗಳು ಗುಂಪೊಂದು ಕದಿರುವೇಲು ಮೇಲೆ ನಡೆಸಿದ್ದ ದಾಳಿಯ ಹಿಂದೆ ಅನಿತಾಳ ಕೈವಾಡವಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ತನ್ನ ಗಂಡನನ್ನು ಕೊಲ್ಲಲ್ಲು ಈಕೆಯೆ ಸುಫಾರಿ ನೀಡಿದ್ದು, ಹಲ್ಲೆ ಪೂರ್ವನಿಯೋಜಿತ ಎಂಬ ಸತ್ಯವೂ ತಿಳಿದು ಬಂದಿದೆ.

Comments are closed.