ರಾಷ್ಟ್ರೀಯ

ಸ್ನೇಹಿತನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ; ಪತ್ನಿಗೆ ಚೂರಿ ಇರಿದು ಭೀಕರವಾಗಿ ಹತ್ಯೆ ಮಾಡಿದ ಪತಿ !

Pinterest LinkedIn Tumblr

ನೋಯ್ಡಾ: ಮೂರು ಮಕ್ಕಳ ತಾಯಿ ಆಗಿರುವ ತನ್ನ ಪತ್ನಿ ತನ್ನೊಬ್ಬನ ಸ್ನೇತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಹಿನ್ನಲೆಯಲ್ಲಿ ಪತಿ ಪತ್ನಿಗೆ ಚೂರಿ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ನೋಯ್ಡಾದ ಸಲಾರ್ ಪುರ್ ಗ್ರಾಮದ ನಿವಾಸಿ 32 ವರ್ಷದ ಉಮಾ ದೇವಿ ಮೃತ ದುರ್ದೈವಿ. ಉಮಾ 2006ರಲ್ಲಿ ರಾಜಾ ಬಾಬು ಎಂಬುವರನ್ನು ವಿವಾಹವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದು ಅವರಿಗೆಲ್ಲ ಇನ್ನು ಚಿಕ್ಕ ವಯಸ್ಸು. ಮೊದಲ ಗಂಡು ಮಗುವಿಗೆ 7 ವರ್ಷ. ಇನ್ನಿಬ್ಬರು ಹೆಣ್ಣು ಮಕ್ಕಳಾಗಿದ್ದು ಒಬ್ಬಳಿಗೆ ನಾಲ್ಕು ಮತ್ತೊಬ್ಬಳಿಗೆ ಎರಡು ವರ್ಷವಾಗಿದೆ.

ದಂಪತಿ ಕೂಲಿ ಕೆಲಸಗಾರ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಹೊಸ ಬಾಡಿಗೆ ಮನೆಗೆ ವಾಸಕ್ಕೆ ಬಂದಿದ್ದು ರಾಜು ಬಾಬು ಹೆಂಡತಿಯ ಮೇಲೆ ಅನುಮಾನಪಟ್ಟು ಆಕೆಗೆ ಚೂರಿ ಇರಿದು ಹತ್ಯೆ ಮಾಡಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಉಮಾ ದೇವಿಯನ್ನು ನೆರೆಮನೆಯವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ರಾಜು ಬಾಬು ತಲೆಮರೆಸಿಕೊಂಡಿದ್ದಾನೆ. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಉಮಾ ದೇವಿಯ ಸಂಬಂಧಿಕರು ಬಂದು ದೂರು ನೀಡಲಿ ಎಂದು ಪೊಲೀಸರು ಕಾಯುತ್ತಿದ್ದಾರೆ.

Comments are closed.