ರಾಷ್ಟ್ರೀಯ

ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಮೇಲೆ ಭೀಕರ ಚಂಡಮಾರುತ ಅಪ್ಪಳಿಸುವ ಸಾಧ್ಯತೆ

Pinterest LinkedIn Tumblr

ಭುವನೇಶ್ವರ್‌: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಮಂಗಳವಾರ ಬೆಳಗ್ಗೆ ಉಂಟಾದ ಭಾರೀ ವಾಯುಭಾರ ಕುಸಿತ, ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು, ಗುರುವಾರದೊಳಗೆ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ಬಾರಿಯ ಚಂಡಮಾರುತಕ್ಕೆ ಪಾಕಿಸ್ತಾನವು ತಿತ್ಲಿ (ಚಿಟ್ಟೆ) ಎಂದು ಹೆಸರಿಟ್ಟಿದ್ದು, ತಿತ್ಲಿ ಪರಿಣಾಮ ಎರಡು ರಾಜ್ಯಗಳಲ್ಲಿಯೂ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಸಿದೆ.

ಹವಾಮಾನ ಇಲಾಖೆಯು ಒಡಿಶಾದಲ್ಲಿ ಮಂಗಳವಾರ ಮತ್ತು ಬುಧವಾರಕ್ಕೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದ್ದು, ಭಾರೀಯಿಂದ ಅತಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದೆ.

ಆರಂಭದಲ್ಲಿ ಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದ್ದು, ಬಳಿಕ 100 ಕಿ.ಮೀವರೆಗೂ ವೇಗಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Comments are closed.