ರಾಷ್ಟ್ರೀಯ

ನ್ಯಾಯವಾದಿಗಳು ನಡೆಸುವ ಪ್ರತಿಭಟನೆ ಮೇಲಿನ ನಿರ್ಬಂಧ ತೆಗೆಯಲು ಒಪ್ಪದ ನೂತನ ಸಿಜೆಐ

Pinterest LinkedIn Tumblr


ಹೊಸದಿಲ್ಲಿ: ನ್ಯಾಯವಾದಿಗಳು ಪ್ರತಿಭಟನೆ ನಡೆಸಲು ಇರುವ ನಿರ್ಬಂಧವನ್ನು ತೆಗೆದುಹಾಕುವಂತೆ ಬಾರ್‌ ಕೌನ್ಸಿಲ್ ಮಾಡಿದ್ದ ಮನವಿಯನ್ನು ನೂತನ ಸಿಜೆಐ ರಂಜನ್ ಗೊಗೊಯ್ ಶನಿವಾರ ತಿರಸ್ಕರಿಸಿದ್ದಾರೆ.

ನ್ಯಾಯವಾದಿಗಳ ಪ್ರತಿಭಟನೆಗೆ ಕಳೆದ 16 ವರ್ಷಗಳಿಂದ ನಿರ್ಬಂಧ ಹೇರಲಾಗಿದೆ.

ನೂತನ ಸಿಜೆಐ ಅವರನ್ನು ಅಭಿನಂದಿಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಿತಿ ಚೇರ್ಮನ್ ಮನನ್ ಕುಮಾರ್‌ ಮಿಶ್ರಾ, ಸಿಜೆಐ ಬಳಿ ವಕೀಲರ ಮೇಲಿನ ನಿರ್ಬಂಧ ತೊಡೆದುಹಾಕುವ ಕುರಿತು ಪ್ರಸ್ತಾಪಿಸಿದರು.

ಆದರೆ ನಿರ್ಬಂಧ ತೆಗೆಯುವ ಪ್ರಸ್ತಾಪವನ್ನು ಖಡಕ್ಕಾಗಿ ತಿರಸ್ಕರಿಸಿದ ಗೊಗೊಯ್, ನೀವೇಕೆ ಪ್ರತಿಭಟನೆ ಮಾಡಬೇಕು? ನೀವೇ ಪ್ರತಿಭಟನೆ ಮಾಡಿದರೆ ಕೋರ್ಟಿನ ಕಲಾಪಗಳನ್ನು ಯಾರು ನಿರ್ವಹಿಸುತ್ತಾರೆ? ನಿಮ್ಮ ಅನುಪಸ್ಥಿತಿ ಕೋರ್ಟಿನಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಜನರಿಗೆ ತೊಂದರೆಯುಂಟಾಗುತ್ತದೆ. ನೀವು ಪ್ರತಿಭಟನೆ ಎಂದು ತೆರಳಿದರೆ ಅದೆಷ್ಟೋ ಜನರಿಗೆ ನ್ಯಾಯ ಇಲ್ಲದಂತಾಗುತ್ತದೆ. ಹೀಗಾಗಿ ನೀವು ಪ್ರತಿಭಟನೆ ಮಾಡುತ್ತಾ ಕೂರುವುದು ಸರಿಯಲ್ಲ. ನಿರ್ಬಂಧ ಹಾಗೆಯೇ ಇರಲಿ ಎಂದು ಕಿವಿಮಾತು ಹೇಳಿದ್ದಾರೆ.

ನ್ಯಾಯಾಂಗವನ್ನು ಉಳಿಸಬೇಕು ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂಬ ಗಂಭೀರ ಕಾರಣ ಹೊರತುಪಡಿಸಿ, ಉಳಿದಂತೆ ಯಾವುದೇ ಪ್ರತಿಭಟನೆ ನಡೆಸಲು ಸಮ್ಮತಿಯಿಲ್ಲ ಎಂದು ಸುಪ್ರೀಂಕೋರ್ಟಿನ ನ್ಯಾಯಾಧೀಶ ಅರುಣ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

Comments are closed.