ರಾಷ್ಟ್ರೀಯ

ಮಕ್ಕಳ ಪ್ರತಿಭಟನೆಗೆ ಸ್ಪಂಧಿಸಿ ಅಪಹರಿಸಿದ 12ನೇ ತರಗತಿ ವಿದ್ಯಾರ್ಥಿಯ ಬಿಡುಗಡೆ ಮಾಡಿದ ನಕ್ಸಲರು

Pinterest LinkedIn Tumblr


ರಾಯ್‌‌ಪುರ: ಶಾಲಾ ಮಕ್ಕಳು ನಡೆಸಿದ ಪ್ರತಿಭಟನೆಗೆ ಸ್ಪಂದಿಸಿ, ಅಪಹರಿಸಿದ್ದ 12ನೇ ತರಗತಿ ಮುಖೇಶ್ ಎಂಬ ವಿದ್ಯಾರ್ಥಿಯನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ.

ಕಾರಣ ಹೇಳದೆ ಸುಕ್ಮಾ ಜಿಲ್ಲೆಯಲ್ಲಿ ಪೋಡಿಯಂನ ಮುಖೇಶ್ ಎಂಬ 12ನೇ ತರಗತಿಯ ವಿದ್ಯಾರ್ಥಿ ತನ್ನ ಶುಕ್ಮಾನಲ್ಲಿನ ಕೊಂಟದಲ್ಲಿರುವ ಮನೆಗೆ ತೆರಳುತ್ತಿದ್ದಾಗ ನಕ್ಸಲರು ಅಪಹರಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಆರು ವರ್ಷದ ಮಕ್ಕಳೂ ಸೇರಿ ನೂರಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಬಂದು ಅಪಹರಣದ ವಿರುದ್ಧ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು 12ನೇ ತರಗತಿಯ ವಿದ್ಯಾರ್ಥಿ ಮುಖೇಶ್‌ನನ್ನು ಬಿಡುಗಡೆ ಮಾಡದಿದ್ದರೆ ಉಪವಾಸ ಸತ್ಯಾಗ್ರಹ ಕೂರುವುದಾಗಿ ನಕ್ಸಲರಿಗೆ ಎಚ್ಚರಿಕೆ ನೀಡಿದರು. ಇಷ್ಟೆೆಲ್ಲಾ ಆದ ನಂತರ ಮಕ್ಕಳ ಪ್ರತಿಭಟನೆಗೆ ಸ್ಪಂದಿಸಿದ ನಕ್ಸಲರು ಮುಖೇಶ್ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ, ಮುಕೇಶ್‌ನನ್ನು ಬಿಡುಗಡೆ ಮಾಡಿ ಎಂಬ ಮಕ್ಕಳ ಮನವಿಗೆ ನಕ್ಸಲರು ಸಕಾರಾತ್ಮಕವಾಗಿ ಸ್ಪಂದಿಸಿ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಕೃತ್ಯಕ್ಕೆೆ ಯಾವುದೇ ಕಾರಣವನ್ನೂ ಅವರು ನೀಡಿರಲಿಲ್ಲ. ಮಾನವೀಯತೆ ದೃಷ್ಟಿಯಿಂದ ಮಗನನ್ನು ಬಿಡುಗಡೆ ಮಾಡುವಂತೆ ಮುಕೇಶ್ ಪಾಲಕರೂ ಕೇಳಿಕೊಂಡಿದ್ದರು ಎಂದಿದ್ದಾರೆ.

Comments are closed.