ರಾಷ್ಟ್ರೀಯ

ಜೀವಂತವಾಗಿದ್ದ ಯುವಕನನ್ನು ಸತ್ತಿದ್ದಾನೆ ಎಂದು ಘೋಷಿಸಿದ ವೈದ್ಯರು

Pinterest LinkedIn Tumblr


ಇಂದೋರ್: ಜೀವಂತವಾಗಿದ್ದ ಯುವಕನನ್ನು ವೈದ್ಯರು ಸತ್ತಿದ್ದಾನೆ ಎಂದು ಘೋಷಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರಾತ್ರಿ ಇಡೀ ಬದುಕಿದ್ದ ಯುವಕ ದುರದೃಷ್ಟವಶಾತ್ ಬದುಕಿದ್ದಾನೆ ಎಂದು ತಿಳಿದ ಕೆಲ ಹೊತ್ತಿನಲ್ಲಿ ಸಾವನ್ನಪ್ಪಿದ್ದಾನೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಕೈಲಾಸ್ ಚೌಹಾನ್‌ನನ್ನು ಪರೀಕ್ಷಿಸಿದ್ದ ಇಂದೋರ್‌ನ ಮೈ ಹಾಸ್ಪಿಟಲ್ ವೈದ್ಯರು ಗುರುವಾರ ರಾತ್ರಿ ಆತ ಸತ್ತಿರುವುದಾಗಿ ಘೋಷಿಸಿದ್ದರು. ಆತನ ದೇಹವನ್ನು ಶವಾಗಾರದಲ್ಲಿರಿಸಲಾಗಿತ್ತು.

ಶುಕ್ರವಾರ ಮುಂಜಾನೆ ಆತನ ಪರಿವಾರದವರು ದೇಹವನ್ನು ಕೊಂಡೊಯ್ಯಲು ಬಂದಾಗ ಉಸಿರಾಡುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆತನನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸ್ವಲ್ಪ ಹೊತ್ತಿನ ಮೊದಲು ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.

ಬದುಕಿದ್ದ ಮಗನಿಗೆ ಸೂಕ್ತ ಚಿಕಿತ್ಸೆ ನೀಡಿ ವೆಂಟಿಲೇಟರ್‌ನಲ್ಲಿಡುವ ಬದಲು ಸತ್ತಿದ್ದಾನೆ ಎಂದು ಶವಾಗಾರದಲ್ಲಿಡಲಾಯಿತು. ಸಂಪೂರ್ಣ ರಾತ್ರಿ ಆತ ಜೀವಂತವಾಗಿದ್ದ. ಸೂಕ್ತ ಚಿಕಿತ್ಸೆ ನೀಡಿದ್ದರೆ ಆತ ಬದುಕುತ್ತಿದ್ದ. ವೈದ್ಯರ ನಿರ್ಲಕ್ಷದಿಂದ ಮಗ ಸತ್ತಿದ್ದಾನೆ ಎಂದು ಮೃತನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Comments are closed.