ರಾಷ್ಟ್ರೀಯ

ಪದವಿ ಗಳಿಸಿ 50 ವರ್ಷದ ನಂತರ 88ನೇ ವಯಸ್ಸಿಗೆ ಎಂಎ ಅಧ್ಯಯನಕ್ಕೆ ಮುಂದಾದ ಅಜ್ಜ

Pinterest LinkedIn Tumblr


ಗುವಾಹಟಿ: ಪದವಿ ಗಳಿಸಿ 50 ವರ್ಷಗಳ ಬಳಿಕ ಸ್ನಾತಕೋತ್ತರ ಪದವಿ ಪಡೆಯಲು ವೃದ್ಧ ಕಾಲೇಜಿನಲ್ಲಿ ನೋಂದಣಿ ಮಾಡಿದ್ದಾರೆ.

88 ವರ್ಷದ ರವೀಂದ್ರನಾಥ್‌ ದಾಸ್‌ ದಿಬ್ರುಗಡ ವಿಶ್ವವಿದ್ಯಾಲಯದಡಿ ಎಂಎ ಪದವಿ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. 1968ರಲ್ಲಿ ಜೋಹ್ರತ್‌ ಕಾಲೇಜಿನಲ್ಲಿ ರಾತ್ರಿ ತರಗತಿಗೆ ತೆರಳುತ್ತಿದ್ದ ದಾಸ್‌, ಬಡತನ ಹಾಗೂ ವಿವಿಧ ಕಾರಣಗಳಿಂದ ಸ್ನಾತಕೋತ್ತರ ಪದವಿ ಗಳಿಸಲು ಸಾಧ್ಯವಾಗಿರಲಿಲ್ಲ. ಅಂತೆಯೇ ಕೆಲ ವರ್ಷಗಳ ಹಿಂದೆ ಪದವಿ ಪಡೆಯಲು ಮುಂದಾಗಿದ್ದ ವೇಳೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದರು. ಹೀಗಾಗಿ ಎಂಎ ಪದವಿ ಪಡೆಯುವ ಅಭಿಲಾಷೆ ಈಡೇರಿದಿಲ್ಲ. ಈ ವರ್ಷ ಜೋಹ್ರತ್‌ ಕಾಲೇಜಿನ ಮೂಲಕವೇ ಎಂಎ ಪದವಿಗೆ ನೋಂದಣಿ ಮಾಡಿಕೊಂಡಿದ್ದಾರೆ.

ಶಿಕ್ಷಣ ಪಡೆಯಲು ವಯಸ್ಸಿನ ಮಿತಿ ಇಲ್ಲ ಎಂಬ ಅಭಿಪ್ರಾಯದಲ್ಲಿ ದೃಢವಾಗಿ ನಂಬಿಕೆ ಇರಿಸಿದ್ದೇನೆ. 1951ರ ಬಳಿಕ ಮೆಟ್ರಿಕ್‌ ಪರೀಕ್ಷೆ ಉತ್ತೀರ್ಣವಾದ ಬಳಿಕ ಟೀ ಗಾರ್ಡನ್‌ನಲ್ಲಿ ಕೆಲಸ ಮಾಡುತ್ತಿದ್ದೆ. ರಾತ್ರಿ ಕಾಲೇಜಿನಲ್ಲಿ ಕಲಿಯಲು ನಿರ್ಧರಿಸಿ, ಸಂಜೆ ಕಾಲೇಜಿಗೆ ನೋಂದಣಿ ಮಾಡಿಕೊಂಡೆ. ಕೆಲ ಸಮಯದ ಬಳಿಕ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. 50ರ ಹರೆಯದಲ್ಲಿ ನನ್ನದೇ ಸ್ವಂತ ಪ್ರಿಂಟಿಂಗ್‌ ಪ್ರೆಸ್‌ ಆರಂಭಿಸಿ, ವ್ಯಾಪಾರ ಆರಂಭಿಸಿದೆ. ಅಡುಗೆ ಸಾಮಗ್ರಿಗಳ ಮಾರಾಟದ ಮಳಿಗೆಯನ್ನೂ ಆರಂಭಿಸಿದೆ. ಜೀವನ ಬದಲಾಯಿತು. ಆದರೆ ಕಲಿಕೆಯ ಆಸಕ್ತಿ ಕಡಿಮೆ ಆಗಿಲ್ಲ. ಹೀಗಾಗಿ ಕಾಲೇಜಿಗೆ ನೋಂದಣಿ ಮಾಡಿಕೊಂಡಿದ್ದೇನೆ ಎಂದು ದಾಸ್‌ ತಿಳಿಸಿದ್ದಾರೆ.

88ನೇ ವಯಸ್ಸಿನಲ್ಲಿ ದಿನ ನಿತ್ಯ ಕಾಲೇಜಿಗೆ ಹೋಗುವುದು ಹೊಸ ಅನುಭವ ನೀಡಲಿದೆ. ಇಂದಿನ ತಲೆಮಾರಿನ ಮಕ್ಕಳು ನನಗೆ ಪ್ರೇರಣೆ ಎಂದು ತಿಳಿದು ಕೊಳ್ಳುತ್ತೇನೆ ಎಂದು ದಾಸ್‌ ಹೇಳಿದ್ದಾರೆ. ಜೋಹ್ರತ್‌ ಕಾಲೇಜು, ಜೀವನದಲ್ಲಿ ಸಾಕಷ್ಟು ಅನುಭವವುಳ್ಳ ದಾಸ್‌ ಅವರನ್ನು ಬರಮಾಡಿಕೊಳ್ಳಲು ಕಾತರಿಸುತ್ತಿದೆ.

Comments are closed.