ರಾಷ್ಟ್ರೀಯ

ಹೃದಯ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ನನ್ನ ಮೇಲೆ ವೈದ್ಯರು ಲೈಂಗಿಕ ದೌರ್ಜನ್ಯ: ರೋಗಿಯೊಬ್ಬರ ಆಘಾತಕಾರಿ ಆರೋಪ

Pinterest LinkedIn Tumblr


ಹೊಸದಿಲ್ಲಿ: ಹೃದಯ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ನನ್ನ ಮೇಲೆ ವೈದ್ಯರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ಎಂದು ರೋಗಿಯೊಬ್ಬರು ಆಘಾತಕಾರಿ ಆರೋಪ ಮಾಡಿದ್ದಾರೆ.

ಗೋವಿಂದ ವಲ್ಲಭ್ ಪಂತ್ ಸರಕಾರಿ ಆಸ್ಪತ್ರೆಯ ವೈದ್ಯರ ಮೇಲೆ 45 ವರ್ಷದ ಮಹಿಳೆ ಲೈಂಗಿಕ ಕಿರುಕುಳದ ದೂರು ಸಲ್ಲಿಸಿದ್ದಾರೆ.

ಕೆಲ ದಿನಗಳಿಂದ ನನಗೆ ಉಸಿರಾಟದ ಸಮಸ್ಯೆ ಇತ್ತು. ಇದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದು ಪತ್ತೆಯಾಗಿ ಆಂಜಿಯೋಗ್ರಫಿ ಮಾಡಲು ಗೋವಿಂದ ವಲ್ಲಭ್ ಪಂತ್ ಆಸ್ಪತ್ರೆಗೆ ದಾಖಲಾಗಿದ್ದೆ. ಸೆಪ್ಟೆಂಬರ್ 12 ರಂದು ನನಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ನಾನು ಅರಿವಳಿಕೆಯಿಂದ ಹೊರಬಂದು ಪ್ರಜ್ಞೆ ಮರಳಿದ ಬಳಿಕ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಅರಿವಾಯ್ತು ಎಂದು ಮಹಿಳೆ ದೂರಿದ್ದಾಳೆ.

ತನ್ನ ನೋವಿನ ಕಥೆಯನ್ನು ವಿವರಿಸಿ ಕಣ್ಣೀರು ಸುರಿಸುತ್ತ ಮಹಿಳೆ ಚಿತ್ರೀಕರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಈ ಕುರಿತು ತನಿಖೆ ನಡೆಸುವಂತೆ ದೆಹಲಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಷ್ಟೇ ಅಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆರೋಗ್ಯ ಮಂತ್ರಿ ಸತ್ಯೇಂದ್ರ ಜೈನ್ ಅವರಿಗೂ ಸಹ ಪತ್ರ ಬರೆದಿದ್ದಾರೆ.

ಕಳೆದವಾರ ದೆಹಲಿಯ ರೋಹಿನಿ ಪ್ರದೇಶದಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣದ ಬೆನ್ನ ಹಿಂದೆಯೇ ಈ ಘಟನೆ ನಡೆದಿದೆ.

Comments are closed.