
ಚೆನ್ನೈ: ಡಿಎಂಕೆಯ ಮಾಜಿ ಕಾರ್ಪೊರೇಟರ್ ಎಸ್. ಸೆಲ್ವ ಕುಮಾರ್ ಅವರು ಗುರುವಾರ ಬ್ಯೂಟಿಪಾರ್ಲರ್ ನಲ್ಲಿದ್ದ ಮಹಿಳೆಯೊಬ್ಬರನ್ನು ಥಳಿಸಿ, ಅವರಿಗೆ ಕಾಲಿನಿಂದ ಒದೆಯುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಡಿಎಂಕೆ ಮುಖಂಡನನ್ನು ಬಂಧಿಸಿದ್ದಾರೆ. ಅಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಸೆಲ್ವ ಕುಮಾರ್ ಅವರನ್ನು ಉಚ್ಚಾಟಿಸಲಾಗಿದೆ.
ಚೆನ್ನೈನಿಂದ 300 ಕಿ.ಮೀ.ದೂರದಲ್ಲಿರುವ ಪೆರಂಬಲೂರ್ ನಲ್ಲಿ ಈ ಘಟನೆ ನಡೆದಿದ್ದು, ಸೆಲ್ವ ಕುಮಾರ್ ಅವರು ತಮ್ಮಿಂದ ಸಾಲ ಪಡೆದಿದ್ದ ಬ್ಯೂಟಿಪಾರ್ಲರ್ ಮಹಿಳೆಗೆ ಪದೆಪದೇ ಒದೆಯುತ್ತಿರುವ ದಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಪೊಲೀಸರು ಸೆಲ್ವ ಕುಮಾರ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಸೆಲ್ವ ಕುಮಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ
Comments are closed.