ರಾಷ್ಟ್ರೀಯ

ಕೇರಳ: ನೀರಿನಲ್ಲಿ ಮನೆ ಮುಳುಗಿದ್ದರೂ ಮದುವೆ!

Pinterest LinkedIn Tumblr


ಕೇರಳ: ಪ್ರಕೃತಿಯ ಮುನಿಸಿಗೆ ದೇವರನಾಡು ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. 96 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಪ್ರವಾಹಕ್ಕೆ ಸಿಲುಕಿ ಸಾಕಷ್ಟು ಜನರು ಬಲಿಯಾಗಿದ್ದಾರೆ. ಇಂತಹ ಶೋಚನೀಯ ಪರಿಸ್ಥಿತಿಯ ನಡುವೆಯೇ ನವಜೋಡಿ ಹಸೆಮಣೆ ಏರಿದ್ದಾರೆ.

ವರ ಅಂಜು ವಧು ಸೈಜು ಎಂಬಾಕೆಯನ್ನು ವರಿಸಿದ್ದಾರೆ. ಮಲಪ್ಪುರಂ ಜಿಲ್ಲೆಯ ಆಶ್ರಯತಾಣವೊಂದರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಿರಿಪುಂತ್ರ ದೇವಸ್ಥಾನದಲ್ಲಿ ತಾಳಿಕಟ್ಟಿದ್ದಾರೆ. ಹಿರಿಯರು, ಸಂಬಂಧಿಕರು ಮತ್ತು ಆಶ್ರಯ ತಾಣದ ಜನರು ಈ ನವಜೋಡಿಗೆ ಹರಸಿ ಹಾರೈಸಿದ್ದಾರೆ.

“ನಮ್ಮ ಮನೆ ನೀರಿನಲ್ಲಿ ಮುಳುಗಿ ಹೋಗಿದೆ. ಮೊದಲು ನಾವು ಮದುವೆಯನ್ನು ಮುಂದೂಡಲು ನೋಡಿದೆವು. ಆದರೆ ಜನರಿಂದ ನಮಗೆ ಸಹಕಾರ ಸಿಕ್ಕ ಮೇಲೆ ಮದುವೆ ಮಾಡಿಬಿಡುವುದಾಗಿ ನಿರ್ಧರಿಸಿದೆವು” ಎಂದು ವಧುವಿನ ಸಂಬಂಧಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದರು. ರುಚಿಕರವಾದ ಮದುವೆ ಊಟ ಹಾಕಿಸುವುದಾಗಿ ದೇವಾಲಯದ ಟ್ರಸ್ಟೀ ಒಪ್ಪಿಕೊಂಡರು.

ಮಲಪ್ಪುರಂ ಜಿಲ್ಲೆಯ ತಿರುನವ್ಯ ಮತ್ತು ನಿಲಂಬುರ್​​ ಆಶ್ರಯ ತಾಣಗಳಲ್ಲಿ ಇದೇ ರೀತಿಯ ಮದುವೆಗಳು ನಡೆದಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಮಲಪ್ಪುರಂ ಕೇರಳದಲ್ಲಿ ಅತಿ ಹೆಚ್ಚು ಪ್ರವಾಹದ ಒಡೆತ ತಿಂದ ಜಿಲ್ಲೆಯಾಗಿದೆ. ಇದೀಗ 183 ಕ್ಯಾಂಪ್​ಗಳನ್ನು ಹಾಕಲಾಗಿದ್ದು, ರಾಜ್ಯಾದ್ಯಂತ ಒಟ್ಟಾರೆ 30 ಸಾವಿರ ಜನರನ್ನು ರಕ್ಷಿಸಲಾಗಿದೆ.

Comments are closed.