ರಾಷ್ಟ್ರೀಯ

ತಂಗಿಯ ಮಗಳ ಮೇಲೆ ನಾಲ್ವರು ಮಾವಂದಿರಿಂದ ಸಾಮೂಹಿಕ ಅತ್ಯಾಚಾರ !

Pinterest LinkedIn Tumblr

ಅಹಮದಾಬಾದ್: ಒಡಹುಟ್ಟಿದ ತಂಗಿಯ ಮಗಳ ಮೇಲೆ ನಾಲ್ವರು ಸೋದರ ಮಾವಂದಿರು ಸಾಮೂಹಿಕ ಅತ್ಯಾಚಾರ ನಡೆಸಿರುವ ದಾರುಣ ಘಟನೆ ಅಹಮದಾಬಾದ್ ನ ಶಾಹ್ ಪುರದಲ್ಲಿ ನಡೆದಿದೆ.

ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತ ಯುವತಿಯ ತಂದೆ ತೀರಿಕೊಂಡಿದ್ದರು. ಇನ್ನು ತಾಯಿ ಬೇರೆ ಮದುವೆ ಮಾಡಿಕೊಂಡಿದ್ದರು. ಹೀಗಾಗಿ ಯುವತಿ ಮತ್ತು ಒಡಹುಟ್ಟಿದವರಿಬ್ಬರು ಅಜ್ಜಿಯ ಮನೆಯಲ್ಲಿ ವಾಸವಿದ್ದರು.

ಸಂತ್ರಸ್ತ ಯುವತಿ ಅಜ್ಜಿಯ ಜತೆ ಮನೆಯಲ್ಲಿ ಮಲಗಿದ್ದಾಗ ನಾಲ್ವರು ಬಂದು ಅತ್ಯಾಚಾರ ನಡೆಸಿದ್ದಾರೆ. ಇಬ್ಬರು ಕೈ ಮತ್ತು ಕಾಲು ಹಿಡಿದುಕೊಂಡಿದ್ದು ಇಬ್ಬರು ರೇಪ್ ಮಾಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ಜತೆ ಆರೋಪಿಗಳಿಗೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪವಿತ್ತು. ಈ ಮೂವರು ಮನೆಯಲ್ಲೇ ಇದ್ದರೆ ಆಸ್ತಿಯು ಕೈತಪ್ಪುತ್ತದೆ ಎಂಬ ಕಾರಣಕ್ಕೆ ಅವರನ್ನು ಮನೆಯಿಂದ ಹೊರ ಹಾಕುವ ಪ್ರಯತ್ನ ನಡೆಸಿದ್ದಾರೆ.

Comments are closed.