ರಾಷ್ಟ್ರೀಯ

ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು 200 ಮಹಿಳೆಯರಿಗೆ ಬೆತ್ತಲೆ ಫೋಟೋ ಕಳುಹಿಸುತ್ತಿದ್ದ ವ್ಯಕ್ತಿ ಬಂಧನ

Pinterest LinkedIn Tumblr

ನವದೆಹಲಿ: ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ಅದರ ಮೂಲಕ 200 ಮಹಿಳೆಯರಿಗೆ ಬೆತ್ತಲೆ ಫೋಟೋಗಳನ್ನು ಕಳುಹಿಸುತ್ತಿದ್ದ ವ್ಯಕ್ತಿಯನ್ನು ಹರ್ಯಾಣ ಪೋಲೀಸರು ಬಂಧಿಸಿದ್ದಾರೆ.

ಗುರುಗಾವ್ ಜಿಲ್ಲೆಯ ವಿಜಯ್ ಎಂಬಾತನನ್ನು ಮಂಗಳವಾರ ಆತನ ಮನೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಯುವತಿಯ ಹೆಸರಲ್ಲಿ ಖಾತೆ ತೆರೆದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದಾಗಿ ವಿಚಾರಣೆ ವೇಳೆ ಆತನೇ ಬಾಯಿಬಿಟ್ಟಿದ್ದಾನೆ. ಹಲವು ಮಹಿಳೆಯರ ಫೋಟೋಗಳನ್ನು ಅವರ ಅರಿವಿಗೆ ಬಾರದಂತೆ ಪ್ರೊಫೈಲ್ ನಿಂದ ಕದಿಯುತ್ತಿದ್ದ. ಅನಂತರ ಅವರನ್ನು ಅನ್ ಫ್ರೆಂಡ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಐಜಿಐಎ ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.ವಿಜಯ್ ಮಹಿಳೆ ಮತ್ತು ಪುರುಷರ ಹೆಸರಲ್ಲಿ ನಕಲಿ ಖಾತೆ ತೆರೆಯುತ್ತಿದ್ದ. ಹಲವು ಮಹಿಳೆಯರು ಈತ ಯುವತಿ ಎಂದು ತಿಳಿದು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುತ್ತಿದ್ದರು. ನಂತರ ಅವರಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದನು, ಒಂದು ವೇಳೆ ಮಹಿಳೆಯರು ಅದಕ್ಕೆ ವಿರೋಧ ವ್ಯ ಕ್ತ ಪಡಿಸಿದರೇ, ಅವರ ಪ್ರೊಫೈಲ್ ನಿಂದ್ ಫೊಟೋ ತೆಗೆದು ಅವರ ಫೋಟೋಗಳನ್ನೆ ತಿರುಚಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.

Comments are closed.