ರಾಷ್ಟ್ರೀಯ

ಪೋನ್‌ನಲ್ಲಿ ಮಾತಾಡದ್ದಕ್ಕೆ ಅಪ್ರಾಪ್ತ ಗೆಳತಿಯನ್ನೇ ಬರ್ಬರವಾಗಿ ಕೊಂದ ಪ್ರಿಯಕರ

Pinterest LinkedIn Tumblr

ಜಬಲ್ಪುರ್: ಪೋನ್‌ನಲ್ಲಿ ಮಾತಾಡಲಿಲ್ಲ ಅಂತ ತನ್ನ ಅಪ್ರಾಪ್ತ ಗೆಳತಿಯನ್ನೇ ಪ್ರಿಯಕರ ಬರ್ಬರವಾಗಿ ಕೊಂದಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

ತಿಲ್ಗಾವನ್ ಗ್ರಾಮದ 16 ವರ್ಷದ ಅಪ್ರಾಪ್ತಾ ಬಾಲಕಿ ಜೊತೆ 22 ವರ್ಷದ ಅಮಿತ್ ಬುರ್ಮಾನ್ ಸಂಬಂಧ ಇಟ್ಟುಕೊಂಡಿದ್ದ. ಇದರಿಂದಾಗಿ ಬಾಲಕಿಯ ಪೋಷಕರು ಆತನನೊಂದಿಗೆ ಪೋನ್ ನಲ್ಲಿ ಮಾತನಾಡಬೇಡ ಎಂದು ಹೇಳಿದ್ದಾರೆ.

ಕಳೆದ ರಾತ್ರಿ ಅಮಿತ್ ಸಾಕಷ್ಟು ಬಾರಿ ಗೆಳತಿಗೆ ಫೋನ್ ಮಾಡಿದ್ದಾನೆ. ಆಗ ಬಾಲಕಿ ಫೋನ್ ತೆಗೆದಿರಲಿಲ್ಲ. ಇದರಿಂದ ಕೋಪಗೊಂಡ ಅಮಿತ್ ಆಕೆಯ ತಂಗಿಗೆ ಪೋನ್ ಮಾಡಿ ಪೋನ್ ಮಾಡಿ ಮಾತನಾಡುವಂತೆ ತಿಳಿಸಿದ್ದಾನೆ.

ಇದಾದ ಬಳಿಕವೂ ಬಾಲಕಿ ಫೋನ್ ಮಾಡಿಲ್ಲ ಅಂತ ಕೋಪಗೊಂಡ ಅಮಿತ್ ಇಂದು ಆಕೆಯ ಮನೆಗೆ ಹೋಗಿ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಈ ವೇಳೆ ಬಾಲಕಿಯ ತಂದೆ ಮನೆಯಲ್ಲಿರಲಿಲ್ಲ. ಮಗಳನ್ನು ಕೊಂದಿರುವುದನ್ನು ಕಂಡ ತಾಯಿ ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಬಂದು ಆತನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Comments are closed.