ರಾಷ್ಟ್ರೀಯ

ಹದಿನೇಳರ ಹುಡುಗಿಯ ಮೇಲೆ ಮೂವರಿಂದ ರೇಪ್‌, ವಿಡಿಯೋ

Pinterest LinkedIn Tumblr


ಪ್ರತಾಪಗಢ, ಉತ್ತರ ಪ್ರದೇಶ : ಹದಿನೇಳು ವರ್ಷ ಪ್ರಾಯದ ಹುಡುಗಿಯ ಮೇಲೆ ಮೂವರು ಅತ್ಯಾಚಾರ ನಡೆಸಿದ್ದು ಇನ್ನೋರ್ವನು ಈ ಹೇಯ ಕೃತ್ಯದ ವಿಡಿಯೋ ಮಾಡಿರುವ ಘಟನೆ ಇಲ್ಲಿನ ಲಾಲ್‌ಗ‌ಂಜ್‌ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇಲ್ಲಿಗೆ ಸಮೀಪದ ಜೆವಾಯಿ ಗ್ರಾಮದ ನಿವಾಸಿಯಾಗಿರುವ ಹುಡುಗಿಯು ಮಾರ್ಕೆಟ್‌ನಿಂದ ಮನೆಗೆ ಮರಳುತ್ತಿದ್ದಾಗ ಈ ಆರೋಪಿಗಳು ಬೈಕ್‌ನಲ್ಲಿ ಆಕೆಯನ್ನು ಮನೆಗೆ ಬಿಡುವುದಾಗಿ ನಂಬಿಸಿ ಬೈಕ್‌ ಹತ್ತಿಸಿಕೊಂಡಿದ್ದರು.

ಆದರೆ ನಡುವೆ ಅವರು ನಿರ್ಜನ ಪ್ರದೇಶಕ್ಕೆ ಬೈಕ್‌ ಒಯ್ದು ಅಲ್ಲಿ ಆಕೆಯ ಮೇಲೆ ಸರದಿ ಪ್ರಕಾರ ರೇಪ್‌ ನಡೆಸಿದರು. ನಾಲ್ಕನೇ ವ್ಯಕ್ತಿಯು ಈ ಕೃತ್ಯದ ವಿಡಿಯೋ ಮಾಡಿದ ಎಂದು ಸರ್ಕಲ್‌ ಆಫೀಸರ್‌ ಒ ಪಿ ದ್ವಿವೇದಿ ತಿಳಿಸಿದ್ದಾರೆ.

ಹುಡುಗಿಯ ತಂದೆ ಕೊಟ್ಟಿರುವ ದೂರಿನ ಪ್ರಕಾರ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ಅತ್ಯಾಚಾರ ಎಸಗಿದ ಮೂವರು ಆರೋಪಿಗಳನ್ನು ಬಂಧಿಸಿದರು; ತಲೆ ಮರೆಸಿಕೊಂಡಿರುವ ನಾಲ್ಕನೇ ವ್ಯಕ್ತಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸ್‌ ತನಿಖೆ ನಡೆದಿದೆ.

Comments are closed.