ರಾಷ್ಟ್ರೀಯ

 ಐದೇ ದಿನದಲ್ಲಿ ಅತ್ಯಾಚಾರಿಗೆ ಗಲ್ಲು ಶಿಕ್ಷೆ!

Pinterest LinkedIn Tumblr


ಭೋಪಾಲ್: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಪರಾಧಿಗಳಿಗೆ ಮಧ್ಯಪ್ರದೇಶದ ಗ್ವಾಲಿಯರ್ ಹಾಗೂ ಕಟ್ನಿ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಕಾಟ್ನಿ ಜಿಲ್ಲಾ ನ್ಯಾಯಾಲಯ ಆರೋಪಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಐದು ದಿನದಲ್ಲೇ ಈ ಶಿಕ್ಷೆ ಘೋಷಿಸಿರುವುದು ಗಮನ ಸೆಳೆದಿದೆ.

ನ್ಯಾಯಾಲಯಗಳ ಈ ತೀರ್ಪಿನೊಂದಿಗೆ ಕೇಂದ್ರ ಸರಕಾರ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ನೂತನ ಕಾನೂನು ಜಾರಿ ಮಾಡಿದ ನಂತರ ಮೂವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಇನ್ನು ಮತ್ತೊಂದು ಪ್ರಕರಣದಲ್ಲಿ ಆರು ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆಗೈದ ಮಧ್ಯಪ್ರದೇಶದ ಐಸ್ ಕ್ಯಾಂಡಿ ಮಾರಾಟಗಾರನಿಗೆ ಗ್ವಾಲಿಯರ್ ಕೋರ್ಟ್ ಪ್ರಕರಣ ನಡೆದ 36 ದಿನಗಳೊಳಗೆ ಗಲ್ಲು ಶಿಕ್ಷೆ ವಿಧಿಸಿದೆ. ಪೊಲೀಸರು ಅಪರಾಧಿ ಜಿತೇಂದ್ರ ಕುಶ್ವಂತ್‌ನನ್ನು ಬಂಧಿಸಿದ 12 ದಿನಗಳ ನಂತರ ಆರೋಪಪಟ್ಟಿ ಸಲ್ಲಿಸಿದ್ದರು.

Comments are closed.